ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಕೆವಿನ್‌ ಓʼಬ್ರಿಯಾನ್; 16 ವರ್ಷಗಳ ವೃತ್ತಿಜೀವನ ಅಂತ್ಯ


ಹೊಸಗಂತ ಡಿಜಿಟಲ್‌ ಡೆಸ್ಕ್

2011ರಲ್ಲಿ ಭಾರತದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸುಂಟರಗಾಳಿ ವೇಗದ ಶತಕ ಸಿಡಿಸಿ ಕ್ರಿಕೆಟ್‌ ಜಗತ್ತನ್ನು ದಂಗುಬಡಿಸಿದ್ದ ಐರ್ಲೆಂಡ್‌ ಆಲ್‌ರೌಂಡರ್ ಕೆವಿನ್ ಒ’ಬ್ರಿಯಾನ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ.
ಐರ್ಲೆಂಡ್ ಪರ 16 ವರ್ಷಗಳ ಕಾಲ ಆಡಿದ್ದ ಕೆವಿನ್ ಓ’ಬ್ರಿಯಾನ್ ಅವರು ಟ್ವಿಟರ್‌ನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಓ’ಬ್ರೇನ್ ಜೂನ್ 2006ರಲ್ಲಿ ಚೊಚ್ಚಲ ಏಕದಿನ ಪಂದ್ಯವಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 3 ಟೆಸ್ಟ್, 153 ಏಕದಿನ ಮತ್ತು 110 T20I ಗಳಲ್ಲಿ ಐರ್ಲೆಂಡ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5850 ರನ್ ಗಳಿಸಿ 172 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ನಲ್ಲಿ ಆಡಿದ ನಂತರ ನನ್ನ ವೃತ್ತಿಜೀವನವನ್ನು ಮುಗಿಸಲು ಆಶಿಸಿದ್ದೆ. ಆದರೆ ಕಳೆದ ವರ್ಷದ ವಿಶ್ವಕಪ್‌ ನಂತರ ನಾನು ಐರಿಶ್ ತಂಡಕ್ಕೆ ಆಯ್ಕೆಯಾಗಿಲ್ಲ. ಆಯ್ಕೆದಾರರು ಮತ್ತು ಮ್ಯಾನೇಜ್‌ಮೆಂಟ್ ಬೇರೆಡೆ ನೋಡುತ್ತಿದ್ದಾರೆ. ಹೀಗಾಗಿ ನಿವೃತ್ತಿಗೆ ಮುಂದಾದೆ ಎಂದು ಕೆವಿನ್ ಒ’ಬ್ರಿಯಾನ್ ಬರೆದುಕೊಂಡಿದ್ದಾರೆ.

2011 ರ ಏಕದಿನ ವಿಶ್ವಕಪ್​ನಲ್ಲಿ ಕೆವಿನ್‌ ಇಂಗ್ಲೆಂಡ್ ವಿರುದ್ಧ ಅತಿ ವೇಗದ ಅತೀ ವೇಗದ ಶತಕ ಸಿಡಿಸಿ ಅಬ್ಬರಿಸಿದ್ದರು. ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿದ್ದ ಕೆವಿನ್‌ ರ ಪರಾಕ್ರಮದಿಂದ ಐರ್ಲೆಂಡ್ 328 ರನ್​ಗಳನ್ನು ಚೇಸ್ ಮಾಡಿ ದಾಖಲೆ ಬರೆದಿತ್ತು. ಆ ಪಂದ್ಯ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಏಕದಿನ ವಿಶ್ವಕಪ್​ನಲ್ಲಿ ಇಂದಿಗೂ ಅತೀ ವೇಗದ ಶತಕದ ದಾಖಲೆ ಕೆವಿನ್ ಒಬ್ರಿಯಾನ್ ಅವರ  ಹೆಸರಿನಲ್ಲೇ ಇದೆ.
“ನನ್ನ ದೇಶಕ್ಕಾಗಿ 389 ಪಂದ್ಯಗಳನ್ನು ಆಡಿದ್ದೇನೆ. ಐರ್ಲೆಂಡ್‌ಗಾಗಿ ಆಡುವ ಪ್ರತಿ ನಿಮಿಷವನ್ನು ಆನಂದಿಸಿದ್ದೇನೆ. ಪಿಚ್‌ನಲ್ಲಿ ಅನೇಕ ಸ್ನೇಹಿತರನ್ನು ಪಡೆದುಕೊಂಡಿದ್ದೇನೆ. ರಾಷ್ಟ್ರೀಯ ತಂಡಕ್ಕಾಗಿ ನಾನು ಆಡುವ ದಿನದಿಂದ ನೆನಪಿಡುವ ಅನೇಕ ಸಂತೋಷದ ನೆನಪುಗಳಿವೆ” ಎಂದು ಅವರು ಬರೆದಿದ್ದಾರೆ.
ಇದು ಈಗ ನನ್ನ ಜೀವನ ಮತ್ತು ನನ್ನ ವೃತ್ತಿಜೀವನದ ಮುಂದಿನ ಹಂತದಲ್ಲಿದೆ, ಸಮಯ ಸರಿಯಾಗಿದೆ. ನಾನು ಇಲ್ಲಿ ಐರ್ಲೆಂಡ್‌ನಲ್ಲಿ ನನ್ನ ಸ್ವಂತ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಲು ಯೋಚಿಸಿದ್ದೇನೆ ಎಂದು ಓ’ಬ್ರೇನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!