February 14, 2026
Saturday, February 14, 2026
spot_img

Ireland vs Oman: 235 ರನ್​ ಸಿಡಿಸುವ ಮೂಲಕ ಅಪರೂಪದ ದಾಖಲೆ ಬರೆದ ಐರ್ಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿ ಮೂಡಿಸುವಂತೆ ಐರ್ಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 235 ರನ್ ಕಲೆಹಾಕಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಒಮಾನ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಚೊಚ್ಚಲ ವಿಶ್ವಕಪ್ ಬಳಿಕ 230 ಕ್ಕಿಂತ ಹೆಚ್ಚು ರನ್ ಗಳಿಸಿದ ಅಪರೂಪದ ಸಾಧನೆ ಈ ತಂಡದ ಪಾಲಾಗಿದೆ.

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಆರಂಭದಲ್ಲಿ ಉತ್ತಮ ನೆಲೆ ಕಾಣಿಸಲಿಲ್ಲ. ಆರಂಭಿಕ ಆಟಗಾರರು ಬೇಗನೆ ಔಟ್ ಆದರೂ, ನಂತರ ಮಧ್ಯ ಕ್ರಮಾಂಕದ ಆಟಗಾರರು ತಂಡವನ್ನು ಬಲಪಡಿಸಿದರು. ನಾಯಕ ಲೋರ್ಕನ್ ಟಕರ್ 51 ಎಸೆತಗಳಲ್ಲಿ 94 ರನ್ ಸಿಡಿಸಿ ಪ್ರಮುಖ ಪಾತ್ರವಹಿಸಿದರು. ಗ್ಯಾರೆತ್ ಡೆಲಾನಿ 30 ಎಸೆತಗಳಲ್ಲಿ 56 ರನ್ ಗಳಿಸಿ ಸ್ಕೋರ್ ಹೆಚ್ಚಿಸಿದರು. ಕೊನೆಯಲ್ಲಿ ಜಾರ್ಜ್ ಡಾಕ್ರೆಲ್ 9 ಎಸೆತಗಳಲ್ಲಿ 35 ರನ್ ಹೊಡೆದು ತಂಡವನ್ನು ದೊಡ್ಡ ಮೊತ್ತಕ್ಕೆ ತಲುಪಿಸಿದರು.

ಇದನ್ನೂ ಓದಿ:

20 ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 235 ರನ್ ಪೇರಿಸಿದ ಐರ್ಲೆಂಡ್, ಅಸೋಸಿಯೇಟ್ ರಾಷ್ಟ್ರಗಳಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ತಂಡವಾಯಿತು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಶ್ರೀಲಂಕಾ. 2007ರಲ್ಲಿ ಅವರು 260 ರನ್ ಗಳಿಸಿ ಮೊದಲ ಸ್ಥಾನ ಪಡೆದಿದ್ದರು. ಇದೀಗ 235 ರನ್ ಮೂಲಕ ಐರ್ಲೆಂಡ್ ದ್ವಿತೀಯ ಸ್ಥಾನಕ್ಕೇರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !