September 26, 2026
Saturday, September 26, 2026
spot_img

ನಾಂದೇಡ್ to ಬೀದರ್ ರೈಲು ಮಾರ್ಗ ವಿಳಂಬಕ್ಕೆ ಕಾರಣ ಏನು? ಚವಾಣ್ ಪತ್ರದಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಂದೇಡ್ ಹಾಗೂ ಕರ್ನಾಟಕದ ಬೀದರ್ ನಡುವಿನ ಹೊಸ ರೈಲು ಮಾರ್ಗ ಕಾರ್ಯ ಮುಂದುವರಿಯಲು ತಡವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅಶೋಕ್ ಚವಾಣ್ ಪತ್ರ ಬರೆದು ವಿಳಂಬದ ಹಿನ್ನೆಲೆಯನ್ನು ವಿವರಿಸಿದ್ದಾರೆ.

ಸುಮಾರು 155 ಉದ್ದದ ಈ ರೈಲು ಮಾರ್ಗದಲ್ಲಿ 100 ಭಾಗ ಮಹಾರಾಷ್ಟ್ರ ವ್ಯಾಪ್ತಿಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಯೋಜನೆ ಜಾರಿಗೆ ಬರಲು ಕರ್ನಾಟಕ ಸರ್ಕಾರದ ಅಂತಿಮ ಒಪ್ಪಿಗೆ ಇನ್ನೂ ಲಭ್ಯವಾಗಿಲ್ಲ ಎನ್ನುವುದೇ ತಡವಾಗುತ್ತಿರುವ ಪ್ರಮುಖ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರ ಸರ್ಕಾರವು 50:50 ವೆಚ್ಚ ಹಂಚಿಕೆ ಆಧಾರದ ಮೇಲೆ ಕಾರ್ಯಗತಗೊಳಿಸಲು ನಿರ್ಧರಿಸಿದ್ದು, ಮಹಾರಾಷ್ಟ್ರ ಈಗಾಗಲೇ ತನ್ನ ಪಾಲಿನ ವೆಚ್ಚಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಈ ಮಾರ್ಗ ನಿರ್ಮಾಣವಾದರೆ ಶ್ರೀ ಹಜೂರ್ ಸಾಹಿಬ್ ಮತ್ತು ನಾನಕ್ ಝೀರಾ ಸಾಹಿಬ್ ಯಾತ್ರಾಕ್ಷೇತ್ರಗಳಿಗೆ ನೇರ ಸಂಪರ್ಕ ಸಿಗಲಿದೆ. ಇದರಿಂದ ಯಾತ್ರಿಕರಿಗೆ ಅನುಕೂಲವಾಗುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳ ಹೆಚ್ಚಳಕ್ಕೂ ನೆರವಾಗಲಿದೆ ಎಂದು ಪತ್ರದಲ್ಲಿ ಮಹತ್ವದ ಮಾತು ಹೇಳಿದ್ದಾರೆ.

Must Read