July 23, 2026
Thursday, July 23, 2026
spot_img

ಮೆಸ್ಸಿ ಪಡೆಗೆ ಕಪ್ ಕೊಡಲು ಫಿಫಾ ಸ್ಕೆಚ್? ರೆಫರಿಗಳ ತಾರತಮ್ಯಕ್ಕೆ ಬೇಸತ್ತ ಈಜಿಪ್ಟ್ ಸ್ಟಾರ್ ಮೋಸ್ತಫಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಫಿಫಾ ವಿಶ್ವಕಪ್‌ನ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-3 ಗೋಲುಗಳ ಅಂತರದಿಂದ ರೋಚಕವಾಗಿ ಸೋತ ಈಜಿಪ್ಟ್ ತಂಡ, ಟೂರ್ನಿಯ ನಿಷ್ಪಕ್ಷಪಾತತೆಯನ್ನೇ ಪ್ರಶ್ನಿಸಿದೆ. ಪಂದ್ಯದ ನಂತರ ಮಾತನಾಡಿದ ಈಜಿಪ್ಟ್‌ನ ಫಾರ್ವರ್ಡ್ ಆಟಗಾರ ಮೋಸ್ತಫಾ ಜಿಕೊ, ಪ್ರಸ್ತುತ ವಿಶ್ವಕಪ್ ಸಂಪೂರ್ಣವಾಗಿ ‘ಫಿಕ್ಸ್’ ಆಗಿದೆ ಎಂದು ಫಿಫಾ ಹಾಗೂ ರೆಫರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಜೆಂಟೀನಾಗೆ ಒಲಿಯಲಿದೆಯೇ ಕಪ್?

ಪಂದ್ಯ ಮುಗಿದ ಬಳಿಕ ಅತ್ಯಂತ ಭಾವುಕರಾಗಿ ಮಾತನಾಡಿದ ಜಿಕೊ, “ಮೈದಾನದಲ್ಲಿ ನಡೆದದ್ದು ಸ್ಪಷ್ಟ ಅನ್ಯಾಯ. ರೆಫರಿಗಳ ತಾರತಮ್ಯ ಧೋರಣೆಯಿಂದಾಗಿ ನಮ್ಮ ಇಡೀ ದೇಶದ ಕನಸು ಮತ್ತು ಪರಿಶ್ರಮ ಮಣ್ಣುಪಾಲಾಗಿದೆ. ನಾವು 2-0 ಗೋಲುಗಳಿಂದ ಮುನ್ನಡೆ ಸಾಧಿಸಿ ಗೆಲ್ಲುವುದು ಅವರಿಗೆ ಇಷ್ಟವಿರಲಿಲ್ಲ. ಈ ಟೂರ್ನಿಯನ್ನು ಮೊದಲೇ ಫಿಕ್ಸ್ ಮಾಡಲಾಗಿದ್ದು, ಅರ್ಜೆಂಟೀನಾವನ್ನು ಚಾಂಪಿಯನ್ ಮಾಡಲು ಎಲ್ಲವೂ ಸಿದ್ಧವಾಗಿದೆ ಎಂಬುದು ಜಗತ್ತಿಗೆ ತಿಳಿಯುತ್ತಿದೆ” ಎಂದು ನೇರ ಆರೋಪ ಮಾಡಿದರು.

ಇತಿಹಾಸ ಸೃಷ್ಟಿಸುವ ಹಾದಿಯಲ್ಲಿ ಮುಗ್ಗರಿಸಿದ ಈಜಿಪ್ಟ್

ಪಂದ್ಯದ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದ ಈಜಿಪ್ಟ್ ಪರ 15ನೇ ನಿಮಿಷದಲ್ಲಿ ಯಾಸರ್ ಇಬ್ರಾಹಿಂ ಹಾಗೂ 67ನೇ ನಿಮಿಷದಲ್ಲಿ ಮೋಸ್ತಫಾ ಜಿಕೊ ಗೋಲು ಗಳಿಸಿ 2-0 ಮುನ್ನಡೆ ತಂದುಕೊಟ್ಟಿದ್ದರು. ಆದರೆ, ಕೊನೆಯ ಕ್ಷಣಗಳಲ್ಲಿ ಅರ್ಜೆಂಟೀನಾ ಕಂಬ್ಯಾಕ್ ಮಾಡಿ ಕ್ವಾರ್ಟರ್ ಫೈನಲ್ ತಲುಪಿದರೆ, ಈಜಿಪ್ಟ್ ಕಣ್ಣೀರಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !