ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಭೀಕರ ಹಂತಕ್ಕೆ ಬಂದಿದ್ದು, ಇಸ್ರೇಲ್ ಪಡೆ ಯುದ್ಧಕ್ಕಾಗಿ ಲೇಸರ್ ಬೀಮ್ ಬಳಕೆ ಮಾಡುವ ಆಲೋಚನೆ ಮಾಡುತ್ತಿದೆ.
ಈವರೆಗೂ ಐರನ್ ಡೋಮ್ ಬಳಕೆ ಮಾಡುತ್ತಿದ್ದ ಇಸ್ರೇಲ್ ಇದೀಗ ಐರನ್ ಬೀಮ್ ಬಳಕೆಗೆ ಮುಂದಾಗಿದೆ. ಇದು ತನ್ನತ್ತ ಬರುವ ಕ್ಷಿಪಣಿ, ಸ್ಪೋಟಕಗಳನ್ನು ಕ್ಷಣಮಾತ್ರದಲ್ಲಿ ನಾಶಪಡಿಸುತ್ತದೆ.
ಐರನ್ ಬೀಮ್ ಬಳಕೆ ಮಾಡುವ ಯಾವ ಯೋಜನೆಯೂ ಇರಲಿಲ್ಲ, ಆದರೆ ಇದೀಗ ಯುದ್ಧ ಎದುರಾಗಿರುವ ಕಾರಣ ಐರನ್ ಬೀಮ್ ನಿಯೋಜನೆಯನ್ನು ವೇಗಗೊಳಿಸುತ್ತಿದೆ.
ಇದು ಶಸ್ತ್ರಾಸ್ತ್ರ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಲೇಸರ್ ಕಿರಣಗಳ ಮೂಲಕ ಶತ್ರುಗಳ ಕ್ಷಿಪಣಿ ಹಾಗೂ ಅಸ್ತ್ರಗಳನ್ನು ನಾಶಪಡಿಸಲಾಗುತ್ತದೆ.