ತರಕಾರಿಗಳನ್ನು ಕುಕ್ಕರ್‌ಗೆ ಹಾಕಿ ಮೂರು ವಿಶಲ್ ಆಗೋವರೆಗೂ ನಾವು ಆಫ್ ಮಾಡೋದೆ ಇಲ್ಲ. ಚೆನ್ನಾಗಿ ಬೆಂದರೆ ತಿನ್ನೋಕೆ ಚಂದ ಅನ್ಕೋತಿವಿ. ಇನ್ನು ಮಕ್ಕಳಿಗೆ ತರಕಾರಿ ತಿಂದ್ರು ಅಂತ ಗೊತ್ತಾಗಬಾರದು ಅಂತ ಚೆನ್ನಾಗಿ ಬೇಯಿಸಿ ಅನ್ನದಲ್ಲೇ ಮಿಕ್ಸ್ ಮಾಡಿ ಕೊಟ್ಟುಬಿಡುತ್ತೀವಿ. ಆದರೆ ತರಕಾರಿ ತುಂಬಾ ಬೇಯಿಸೋದು ಒಳ್ಳೆಯದಲ್ವಂತೆ ಹೌದಾ?
ಖಂಡಿತಾ ಹೌದು, ತರಕಾರಿ ಹೆಚ್ಚು ಬೇಯಿಸೋದ್ರಿಂದ ಅದರ ನ್ಯೂಟ್ರಿಯಂಟ್ ವ್ಯಾಲ್ಯೂ ಕಡಿಮೆ ಆಗುತ್ತದೆ. ಜೊತೆಗೆ ಫ್ಲೇವರ್ ಕೂಡ ನೀರಿನಲ್ಲೇ ಹೋಗಿಬಿಡುತ್ತದೆ. ಅರ್ಧಂಬರ್ಧ ಬೇಯಿಸೋದು ಅಥವಾ ಹಸಿ ತರಕಾರಿ ತಿನ್ನೋದು ಬೆಸ್ಟ್.