Saturday, September 23, 2023

Latest Posts

ಹುಡುಗರು ತುಂಬಾನೇ ಸಿಂಪಲ್, ನಿಮ್ಮಿಂದ ಅವರು ನಿರೀಕ್ಷೆ ಮಾಡೋದು ಇಷ್ಟನ್ನ ಮಾತ್ರ!

ಹುಡುಗಿಯರು ತುಂಬಾ ಜಟಿಲ, ಹುಡುಗರು ತುಂಬಾ ಈಸಿ ಗೋಯಿಂಗ್ ಅಂತಾರೆ. ಆದರೆ ಎಲ್ಲ ವಿಷಯದಲ್ಲೂ ಇದೇ ನಿಜ ಅಥವಾ ಇದೇ ಸುಳ್ಳು ಅಂತ ಹೇಳೋಕಾಗೋದಿಲ್ಲ. ಹುಡುಗಿಯರಿಗೆ ಹೇಗೆ ತಮ್ಮ ಸಂಗಾತಿ ಮೇಲೆ ನಿರೀಕ್ಷೆ ಇರುತ್ತದೋ, ಹುಡುಗರಿಗೂ ಅದೇ ರೀತಿ ನಿರೀಕ್ಷೆ ಇರುತ್ತದೆ. ಇದನ್ನು ಅರ್ಥಮಾಡಿಕೊಳ್ಳೋಕೆ ಮುಂದೆ ಓದಿ..

  • ಕೇರ್ ಮಾಡಿ ಅಷ್ಟೆ, ಹುಡುಗರಿಗೆ ಕೇರ್ ಮಾಡುವ ಹುಡುಗಿಯರು ತುಂಬಾನೇ ಇಷ್ಟ. ಅತಿಯಾದ ಕೇರ್, ಪೊಸೆಸಿವ್‌ನೆಸ್ ಬೇಡ. ಆದರೆ ಕೇರಿಂಗ್ ನೇಚರ್ ಇರಲಿ.
  • ಫನ್ನಿಯಾದ ಹುಡುಗಿಯರು ಯಾರಿಗೆ ತಾನೆ ಇಷ್ಟ ಇಲ್ಲ? ತನ್ನ ಹುಡುಗಿ ಜೋಕ್ ಮಾಡಬೇಕು, ಜೋಕ್ ಅವಳಿಗೆ ಅರ್ಥ ಆಗಬೇಕು ಅಂತ ನಿರೀಕ್ಷೆ ಇರುತ್ತದೆ.
  • ಹುಡುಗರ ಪ್ರಯತ್ನಕ್ಕೆ ನೀವು ಬೆಲೆ ಕೊಡಿ. ಅವರು ಅದರಲ್ಲಿ ಯಶಸ್ವಿ ಆಗುತ್ತಾರೋ ಬಿಡುತ್ತಾರೋ, ಆದರೆ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ.
  • ಹೊಗಳಿಕೆ ಇದ್ದೇ ಇರಲಿ. ಹುಡುಗರಿಗೂ ಕೂಡ ಹೊಗಳಿಸಿಕೊಳ್ಳೋದು ಇಷ್ಟ, ಅದರಲ್ಲೂ ಅವರ ಹುಡುಗಿ ಹೊಗಳಿದರೆ ಖುಷಿಗೆ ಪಾರವೇ ಇರೋದಿಲ್ಲ.
  • ಅವರಿಗೆ ಬೆಂಬಲ ಕೊಡಿ, ಹೊಸತೇನೋ ಮಾಡಲು ಹೊರಟಾಗ ಅವರ ಬೆನ್ನೆಲುಬಾಗಿ ನಿಲ್ಲಿ. ನೆಗೆಟಿವ್ ಹುಡುಗಿಯರು ಹುಡುಗರಿಗೆ ಇಷ್ಟ ಆಗೋದಿಲ್ಲ.
  • ಅವರಿಗೆ ಸ್ಪೇಸ್ ಕೊಡಿ. ನಿಮ್ಮ ಹುಡುಗ ಎಂದಾಕ್ಷಣ ಉಸಿರುಗಟ್ಟಿಸುವಷ್ಟು ಪ್ರೀತಿ ಮಾಡಬೇಕು ಅಂತಿಲ್ಲ. ಅವರು ನಿಮ್ಮಿಂದ ಸ್ವಲ್ಪ ಸ್ಪೇಸ್ ಬಯಸಿದಾಗ ಅದನ್ನು ಅರ್ಥಮಾಡಿಕೊಳ್ಳಿ. ನಂಬಿಕೆ ಇಡಿ.
  • ಎಲ್ಲವನ್ನು ಅರ್ಥಮಾಡಿಕೊಳ್ಳಿ. ನಿಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇರೋದು ಎಲ್ಲಕ್ಕಿಂತ ಮುಖ್ಯ. ಇದನ್ನೇ ಹೆಚ್ಚಿನ ಹುಡುಗರು ನಿರೀಕ್ಷೆ ಮಾಡುತ್ತಾರೆ. ಸಣ್ಣ ಪುಟ್ಟ ವಿಷಯದಿಂದ ಜೀವನ ನಿರ್ಧರಿಸುವ ವಿಷಯಗಳ ಬಗ್ಗೆಯೂ ಅವರ ನಿರ್ಧಾರವನ್ನು ನೀವು ಅರ್ಥಮಾಡಿಕೊಳ್ಳಿ. ಅಲ್ಲಿ ಎಲ್ಲವೂ ನಿಮ್ಮ ಒಳ್ಳೆಯದಕ್ಕೇ ಆಗಿರುತ್ತದೆ.
  • ಎಲ್ಲ ವಿಷಯಗಳನ್ನು ಶೇರ್ ಮಾಡಿ, ಸಂವಹನ ಮಾಡಿ, ಹುಡುಗರೇ ಮಾತನಾಡಲಿ, ಅವರೇ ಪ್ರೀತಿ ಹೇಳಲಿ, ಅವರೇ ಮೀಟಿಂಗ್ ಸೆಟ್ ಮಾಡಲಿ ಅಂತ ಕಾಯಬೇಡಿ. ಕೆಲವೊಮ್ಮೆ ನೀವು ಮುಂದಾಳತ್ವ ತೆಗೆದುಕೊಳ್ಳೋದು ಅವರಿಗೆ ಇಷ್ಟವಾಗತ್ತೆ.
  • ಅವರಪ್ಪ ಅಮ್ಮ, ಸ್ನೇಹಿತರನ್ನು ಗೌರವಿಸಿ. ಸ್ನೇಹಿತರ ಬಗ್ಗೆ ಕೀಳಾಗಿ ಮಾತನಾಡುವ ಹುಡುಗಿಯರನ್ನು ಹುಡುಗರು ಇಷ್ಟಪಡೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!