KITCHEN TIPS| ಹಲಸು ಸುಲಿಯೋಕೆ ಕಷ್ಟ ಆಗ್ತಿದ್ಯಾ? ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಲಸು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ…? ಹಲಸಿನ ಹಣ್ಣೆಂದರೆ ಅಬಾಲ ವೃದ್ಧರಿಗೂ ಪ್ರಿಯ. ಆದರೆ ಆ ರುಚಿಕರ ಹಣ್ಣನ್ನು ಕತ್ತರಿಸುವುದೇ ದೊಡ್ಡ ತಲೆನೋವು. ಹಲಸು ಇಷ್ಟವಾದರೂ ಅದರಲ್ಲಿರುವ ಮಯಣ(ಅಂಟು)ದಿಂದಾಗಿ ಅನೇಕರು ಹಲಸಿನಿಂದ ದೂರ ಉಳಿಯುತ್ತಾರೆ. ಈ ಟಿಪ್ಸ್‌ ಅಳವಡಿಸಿದರೆ ಯಾವೊಂದು ಚಿಂತೆಯೂ ಇಲ್ಲದೆ ನಿರಾಳವಾಗಿ ಹಣ್ಣು ತಿನ್ನಬಹುದು. ಅದೇನು ನೋಡೋಣ.

ನಿಮ್ಮ ಕೈಗಳಿಗೆ ಪರಿಶುದ್ಧವಾದ ತೆಂಗಿನೆಣ್ಣೆಯನ್ನು ಸವರಿಕೊಳ್ಳಿ. ಹಣ್ಣು ಕತ್ತರಿಸುವ ಚಾಕುವಿಗೂ ತೆಂಗಿನೆಣ್ಣೆ ಸವರಿಕೊಳ್ಳಿ. ಇದರಿಂದ ಹಣ್ಣು ಕತ್ತರಿಸುವಾಗ ಯಾವುದೇ ರೀತಿಯಲ್ಲಿ ಮಯಣ ಅಂಟಿಕೊಳ್ಳುವುದೇ ಇಲ್ಲ.

ಹಲಸು ಸೀಳುವಾಗ ಬರುವ ಬಿಳಿಬಣ್ಣದ ಮಯಣವನ್ನು ಟಿಶ್ಯೂ ಪೇಪರ್‌ ಸಹಾಯದಿಂದ ಒರೆಸಿಕೊಳ್ಳಿ. ಕೈಗೆ ಎಣ್ಣೆ ನೀರು ಸವರಿಕೊಳ್ಳುತ್ತಿರಿ. ಇದರಿಂದ ಮಯಣವಾಗದಂತೆ ತಡೆಯಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!