ನಿಷ್ಕ್ರಿಯ ಜಿಮೇಲ್ ಖಾತೆಗಳು​ ಡಿಲೀಟ್​: ಗೂಗಲ್ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕನಿಷ್ಠ 2 ವರ್ಷಗಳಿಂದ ಬಳಸದ ಅಥವಾ ಸೈನ್ ಇನ್ ಮಾಡದ ವೈಯಕ್ತಿಕ ಗೂಗಲ್ ಖಾತೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಕಂಟೆಂಟ್​ಗಳನ್ನು ಡಿಲೀಟ್ ಮಾಡುವುದಾಗಿ ಗೂಗಲ್ ಹೇಳಿದೆ.

ಗೂಗಲ್ ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಲಾಗ್‌ಇನ್ ಮಾಡಲು ಹಾಗೂ ಪರಿಶೀಲಿಸಲು ಹೇಳಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾಗಳನ್ನು ಅಳಿಸಿ ಹಾಕುವುದಾಗಿ ಗೂಗಲ್ ಹೇಳಿತ್ತು. ಆದರೀಗ ಇಡೀ ಖಾತೆಯನ್ನೇ ಅಳಿಸಿ ಹಾಕುವುದಾಗಿ ಗೂಗಲ್ ಸಂಸ್ಥೆ ತಿಳಿಸಿದೆ.

ಗೂಗಲ್ ವರ್ಕ್​ ಸ್ಪೇಸ್ (ಜಿಮೇಲ್, ಡಾಕ್ಸ್​, ಡ್ರೈವ್, ಮೀಟ್, ಕ್ಯಾಲೆಂಡರ್), ಯೂಟ್ಯೂಬ್ ಮತ್ತು ಗೂಗಲ್ ಫೋಟೋಸ್‌ನ ನಿಷ್ಕ್ರಿಯ ಖಾತೆಗಳಲ್ಲಿನ ಕಂಟೆಂಟ್​ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಕಂಪನಿ ಹೇಳಿದೆ. ಕಂಪನಿಯ ಹೊಸ ನಿಯಮವು ಮಂಗಳವಾರದಂದು ಜಾರಿಯಾಗಿದ್ದರೂ, ನಿಷ್ಕ್ರಿಯ ಖಾತೆಗಳ ಮೇಲೆ ಇದು ತಕ್ಷಣ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 2023ರ ನಂತರ ಹೊಸ ನಿಯಮವನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ.

ಬಳಕೆದಾರರು ಈ ನೀತಿಯ ಬದಲಾವಣೆ ಬಗ್ಗೆ ತಿಳಿದುಕೊಂಡಿರುವುದು ಹಾಗೂ ತಮ್ಮ ನಿಷ್ಕ್ರಿಯ ಗೂಗಲ್ ಖಾತೆಗಳನ್ನು ಅಳಿಸದಂತೆ ತಡೆಯಲು ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಬಳಕೆದಾರರು ತಮ್ಮ ಹಳೆಯ ಖಾತೆಗಳನ್ನು ಪರಿಶೀಲಿಸುವುದು ಹಾಗೂ ವಿವಿಧ ಚಟುವಟಿಕೆಯನ್ನು ನಿರ್ವಹಿಸುವುದರಿಂದ ಖಾತೆಗಳನ್ನು ಅಳಿಸದಂತೆ ತಪ್ಪಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!