September 28, 2026
Monday, September 28, 2026
spot_img

ಅಂಗಡಿಯಿಂದ ಬೆಣ್ಣೆ ತಂದ್ರೆ ಸಾಕು, ಮನೆಯಲ್ಲಿಯೇ ತುಪ್ಪ ಕಾಯಿಸಬಹುದು? ಇಲ್ಲಿದೆ ಸಿಂಪಲ್‌ ವಿಧಾನ

ಸಾಮಾಗ್ರಿಗಳು
ಬೆಣ್ಣೆ
ಬೆಳ್ಳುಳ್ಳಿ
ಮೆಂತ್ಯೆ
ವಿಳೇದೆಲೆ
ಅರಿಶಿಣ

ಮಾಡುವ ವಿಧಾನ
ಯಾವುದೇ ಬೆಣ್ಣೆಯನ್ನು ತೆಗೆದುಕೊಂಡು ಪಾತ್ರೆಗೆ ಹಾಕಿ, ನಂತರ ಅದಕ್ಕೆ ಜಜ್ಜಿದ ಬೆಳ್ಳ್ಳುಳ್ಳಿ ಹಾಕಿ. ಅದು ಸ್ವಲ್ಪ ಕರಗಿದ ಮೇಲೆ ಮೆಂತ್ಯ ಹಾಗೂ ಅರಿಶಿಣ ಹಾಕಿ ಬಿಡಿ
ಎಲ್ಲ ನೊರೆ ಹೋದ ನಂತರ ವಿಳೇದೆಲೆ ಹಾಕಿ. ವಿಳೇದೆಲೆ ಕ್ರಿಸ್ಪಿ ಆಯ್ತು ಎಂದರೆ ತುಪ್ಪ ರೆಡಿ ಎಂದರ್ಥ.
ಆಮೇಲೆ ತುಪ್ಪ ಸೋಸಿ ಇಟ್ಟುಕೊಳ್ಳಿ.

ಉಳಿದ ಬೆಳ್ಳ್ಳುಳ್ಳಿ ಹಾಗೂ ಮೆಂತ್ಯೆ ಮಿಶ್ರಣಕ್ಕೆ ಟೊಮ್ಯಾಟೊ ಹುರಿದು ಹಾಕಿ, ಉಪ್ಪು ಹಾಗೂ ಹಸಿಮೆಣಸು ಹಾಕಿದ್ರೆ ಟೇಸ್ಟಿ ಚಟ್ನಿ ತಯಾರಾಗುತ್ತದೆ. ಇದನ್ನು ಚಪಾತಿ ಜೊತೆ ತಿನ್ನಬಹುದು.

Must Read