ಕೂತಲ್ಲೇ ಅರ್ಧ ಗಂಟೆ ಕೂತು ಬಿಟ್ರೆ ಕಾಲು ನೋವು, ನಿಂತಲ್ಲೇ ನಿಂತು ಅಡುಗೆ ಮಾಡಿದ್ರೂ ಕಾಲು ನೋವು, ಏನು ಕೆಲಸ ಮಾಡೋಕೂ ಮೂಡ್ ಇಲ್ಲ ಬರೀ ಸುಸ್ತು ಅನಿಸ್ತಾ ಇದ್ಯಾ? ಲೇಡೀಸ್ ಈ ಸಮಸ್ಯೆಯನ್ನು ಇಗ್ನೋರ್ ಮಾಡಬೇಡಿ. ಇದೆಲ್ಲಾ ಮಾಮೂಲಿ ಎನ್ನುವ ಲೇಬಲ್ ಕೂಡ ಹಾಕಬೇಡಿ. ಹೀಗೆಲ್ಲಾ ಆದರೆ ನಿಮ್ಮ ದೇಹದಲ್ಲಿ ಮೆಗ್ನೀಸಿಯಂ ಕಡಿಮೆಯಾಗಿದೆ ಎಂದರ್ಥ. ಎಷ್ಟೋ ಜನರಿಗೆ ಮೆಗ್ನೀಸಿಯಂ ನಮ್ಮ ದೇಹಕ್ಕೆ ಏನೆಲ್ಲಾ ಮಾಡುತ್ತದೆ. ಅದಿಲ್ಲವಾದರೆ ಏನೆಲ್ಲಾ ಸಮಸ್ಯೆ ಬರುತ್ತದೆ ಎನ್ನುವ ಬಗ್ಗೆ ಮಾಹಿತಿಯೇ ಇರೋದಿಲ್ಲ. ಮೆಗ್ನೀಸಿಯಂ ನಮ್ಮ ದೇಹದಲ್ಲಿ ಏನೆಲ್ಲಾ ಕೆಲಸ ಮಾಡ್ತಿದೆ, ಅದು ಕಡಿಮೆಯಾದ್ರೆ ಏನೆಲ್ಲಾ ಲಕ್ಷಣಗಳು ಕಾಣಿಸುತ್ತವೆ, ಲೆವೆಲ್ ಹೆಚ್ಚು ಮಾಡೋಕೆ ಯಾವ ಪದಾರ್ಥಗಳ ಸೇವನೆ ಮಾಡಬೇಕು? ಸಂಪೂರ್ಣ ಮಾಹಿತಿ ನಿಮಗಾಗಿ..

ಮೆಗ್ನೀಸಿಯಂ ಯಾವೆಲ್ಲಾ ಕೆಲಸವನ್ನು ಕಂಟ್ರೋಲ್ ಮಾಡುತ್ತದೆ?

ಮೆಗ್ನೀಸಿಯಂ ನಿಮ್ಮ ಮೂಳೆಗಳ ಆರೋಗ್ಯ ಕಾಪಾಡುತ್ತದೆ. ನಿಮ್ಮ ಹಾರ್ಮೋನುಗಳು ಇರುವಂತೆಯೇ ಇರಲು ಸಹಾಯ ಮಾಡುತ್ತವೆ. ಮೂಡ್ ಸ್ವಿಂಗ್ಸ್ ಅತಿಯಾಗದಂತೆ ಕಂಟ್ರೋಲ್ ಮಾಡುತ್ತವೆ.
ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿ ರೀತಿ ಮೂಳೆಗಳಿಗೆ ಮೆಗ್ನೀಸಿಯಂ ಕೂಡ ಬೇಕು ಹಾಗೂ ಮುಟ್ಟು ನಿಂತ ನಂತರ ಬರುವ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ.
ಒಳ್ಳೆಯ ನಿದ್ದೆ ನೀಡಿ, ಒತ್ತಡದಲ್ಲಿರುವ ನರಗಳನ್ನು ಶಾಂತಗೊಳಿಸೋದು ಮೆಗ್ನೀಸಿಯಂ ಕೆಲಸ. ಇನ್ನು ನಿಮ್ಮ ಹೃದಯದ ಆರೋಗ್ಯಕ್ಕೆ ಮೆಗ್ನೀಸಿಯಂ ಪೂರಕ.
ಮೆಗ್ನೀಸಿಯಂ ಇಲ್ಲವಾದ್ರೆ ಏನು ಲಕ್ಷಣಗಳು ಕಾಣಿಸುತ್ತವೆ?

ಅಲ್ಲಲ್ಲೇ ಮಸಲ್ ಹಿಡಿದುಕೊಂಡಂತೆ ನೋವಾಗುತ್ತದೆ. ಮುಖ್ಯವಾಗಿ ಕಾಲುಗಳು ನೋವಾಗುತ್ತವೆ.
ಕಣ್ಣಿನ ಭಾಗದಲ್ಲಿ ಸಣ್ಣಗೆ ಅಲುಗಾಡುವುದು. ಎಡಗಣ್ಣು, ಬಲಗಣ್ಣು ಅದರುವುದು ಅಂತಾರಲ್ಲ ಅದು ಹಾಗೂ ಕಣ್ಣಿನ ಕೆಳಭಾಗದಲ್ಲಿ ಟ್ವಿಚ್ ಆಗುವುದು ಮೆಗ್ನೀಸಿಯಂ ಕೊರತೆಯ ಲಕ್ಷಣ.
ಏನೂ ಕೆಲಸ ಮಾಡಿಲ್ಲ. ಫಿಸಿಕಲಿ ಹಾಗೂ ಮೆಂಟಲಿ ಸುಸ್ತಾಗಿಲ್ಲ. ಆದರೆ ದೇಹ ಮಾತ್ರ ರೆಸ್ಟ್ ಕೇಳುತ್ತದೆ. ಸುಸ್ತು, ಯಾವುದಕ್ಕೂ ಆಸಕ್ತಿ ಇಲ್ಲ. ಸೋಂಬೇರಿತನ ನಿಮ್ಮನ್ನು ಆವರಿಸುತ್ತದೆ.
ಕಾಲು ಕೈಗಳು ಆಗಾಗ ಜೋಮು ಹಿಡಿಯುವುದು, ಮರಗಟ್ಟುವುದು ಮೆಗ್ನೀಸಿಯಂ ಕೊರತೆಯ ಲಕ್ಷಣವಾಗಿದೆ.
ತೀವ್ರ ಕೊರತೆಯ ಸಂದರ್ಭದಲ್ಲಿ ಹೊಟ್ಟೆನೋವು, ಉಬ್ಬರ, ಸ್ತನಗಳಲ್ಲಿ ನೋವು, ಸಿಕ್ಕಾಪಟ್ಟೆ ಮೂಡ್ ಸ್ವಿಂಗ್ಸ್, ಡಿಪ್ರೆಷನ್ ರೀತಿಯ ಫೀಲಿಂಗ್ಸ್, ಮೂಳೆಗಳಲ್ಲಿ ನೋವು, ಅನಾವಶ್ಯಕ ಸಂದರ್ಭದಲ್ಲಿಯೂ ಒಂಥರಾ ನರ್ವಸ್ ಅಥವಾ ಟೆನ್ಶನ್, ನಿದ್ದೆ ಬಾರದೇ ಇರುವುದು, ಪದೇ ಪದೆ ತಲೆನೋವು ಬರುತ್ತದೆ.
ಯಾವ ಪದಾರ್ಥ ಸೇವನೆ ಉತ್ತಮ?

ನಟ್ಸ್ ಹಾಗೂ ಸೀಡ್ಸ್ ಬಳಕೆ ಮಾಡಿ. ಕುಂಬಳಕಾಯಿ ಬೀಜ, ಚಿಯಾ ಬೀಜ, ಬಾದಾಮಿ, ಗೋಡಂಬಿ. ಶೇಂಗಾ
ಡಾರ್ಕ್ ಚಾಕೋಲೆಟ್, ಪಾಲಕ್, ಬೇಳೆಕಾಳುಗಳು, ಕಿನೋವಾ, ಬ್ರೌನ್ ರೈಸ್. ಅವಕಾಡೋ ಹಾಗೂ ಬಾಳೆಹಣ್ಣು ಸೇವಿಸಿ
ಬ್ರೌನ್ ರೈಸ್, ಯೋಗರ್ಟ್, ಆಲೂಗಡ್ಡೆ, ಪಪಾಯ, ಬಟಾಣಿ, ಹಾಲು, ಸ್ವೀಟ್‌ಕಾರ್ನ್, ಕಿಡ್ನಿ ಬೀನ್ಸ್ ಉತ್ತಮವಾಗಿದೆ.



