ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಫಿನ್ ಬಾಕ್ಸ್‌ನಲ್ಲಿ ಶಾಲೆಗೆ ಬಿರಿಯಾನಿ ತಂದಿದ್ದಕ್ಕಾಗಿ ಮೂರನೇ ತರಗತಿ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ ಘಟನೆ ಉತ್ತರಪ್ರದೇಶದ ಬಿಜ್ನೋರ್‌ನ ಅಮ್ರೋಹಾದಲ್ಲಿ ನಡೆದಿದೆ.
ಅಮ್ರೋಹಾನ ಹೆಸರಾಂತ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯೊಬ್ಬ ಟಿಫಿನ್ ಬಾಕ್ಸ್‌ನಲ್ಲಿ ಬಿರಿಯಾನಿ ತಂದಿದ್ದ. ಇದನ್ನು ಕಂಡ ಪ್ರಾಂಶುಪಾಲರು ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ್ದಾರೆ.
ಪ್ರಾಂಶುಪಾಲರ ಅವಹೇಳನಕಾರಿ ಹೇಳಿಕೆಯಿಂದ ವಿದ್ಯಾರ್ಥಿನಿಯ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಧರ್ಮದವರೆಂದ ಈ ರೀತಿ ಮಾಡಿದ್ದಾರೆ ಎಂದು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.