ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಮಹೇಶ್ ಬಾಬು-ನಮ್ರತಾ ಶಿರೋಡ್ಕರ್ ಪುತ್ರಿ ಸಿತಾರಾ ಘಟ್ಟಮನೇನಿ ಈಗಾಗಲೇ ಸಾಕಷ್ಟು ಜಾಹೀರಾತುಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ನೋಡೋಕೆ ಮುದ್ದಾಗಿರುವ ಈ ಬಾಲೆ ಸಿನಿಮಾಕ್ಕೆ ಯಾವಾಗ ಬರ್ತಾರೆ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.
ಇದಕ್ಕೆ ನಟಿ ನಮ್ರತಾ ಉತ್ತರ ನೀಡಿದ್ದಾರೆ. ಮಗಳನ್ನು ಸಿನಿಮಾ ಫೀಲ್ಡ್‌ಗೆ ಯಾವಾಗ ಕಳಿಸ್ತೀರಿ ಎಂದು ಪ್ರಶ್ನೆಯೊಂದು ಎದ್ದಿದ್ದು, ನಮ್ರತಾ ಸಧ್ಯಕ್ಕಂತೂ ಇಲ್ಲ ಎಂದಿದ್ದಾರೆ. ಮಕ್ಕಳಿಗೆ ಎಜುಕೇಷನ್ ತುಂಬಾನೇ ಮುಖ್ಯ ಎಂದು ನಂಬಿರುವ ನಮ್ರತಾ ಇನ್ನು ಹತ್ತು ವರ್ಷ ಸಿತಾರಾ ಇಂಡಸ್ಟ್ರಿಗೆ ಬರೋದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.