ಎಷ್ಟೋ ಜನರಿಗೆ ಪ್ಯುಬಿಕ್ ಹೇರ್ ರಿಮೂವ್ ಮಾಡಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಇರುತ್ತದೆ. ಇದನ್ನು ಯಾರ ಬಳಿಯೂ ಕೇಳಲಾಗದೆ ಸುಮ್ಮನಾಗುತ್ತದೆ. ಇನ್ನು ಹಲವರು ಬಿಕಿನಿ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಇದರಿಂದ ಹೈಜಿನ್ ಹೆಚ್ಚಾಗಿರುತ್ತದೆ ಎಂದುಕೊಳ್ತಾರೆ. ವ್ಯಾಕ್ಸ್ ಮಾಡಿಸಬೇಕೋ ಬೇಡವೋ ಇಲ್ಲಿದೆ ಡೀಟೇಲ್ಸ್..
ಮಹಿಳೆಯರು, ಪುರುಷರು ಗುಪ್ತಾಂಗಳಲ್ಲಿನ ಕೂದಲನ್ನು ತೆಗೆಯುವುದು ಉತ್ತಮವಲ್ಲ. ತೆಗೆದರೆ ಮಾತ್ರ ಕ್ಲೀನ್ ಇಲ್ಲವೇ ಗಲೀಜು ಎಂದುಕೊಳ್ಳಬೇಡಿ. ಹಾಗಿಲ್ಲ. ಬಿಕಿನಿ ವ್ಯಾಕ್ಸ್ ಯಾವಾಗೋ ಒಮ್ಮೆ ಮಾಡಿಸಿದರೆ ಒಕೆ ಆದರೆ ಪದೇ ಪದೆ ಈ ರೀತಿ ಮಾಡುವುದು ಬೇಡ. ಕೂದಲು ನಿಮ್ಮನ್ನು ಎಷ್ಟೊಂದು ಬಗೆಯ ಇನ್ಫೆಕ್ಷನ್ಸ್‌ನಿಂದ ರಕ್ಷಿಸುತ್ತದೆ. ನೀವು ಕೂದಲನ್ನು ತೆಗೆದರೆ ಬೇಗ ಸಮಸ್ಯೆಗೆ ಒಳಗಾಗುತ್ತೀರಿ. ಯುಟಿಐಗಳು, ವಜಿನೈಟಿಸ್ ಮತ್ತು ಯೀಸ್ಟ್ ಸೋಂಕುಗಳಂತಹ ಸಾಮಾನ್ಯ ಸೋಂಕುಗಳಿಗೆ ವ್ಯಕ್ತಿಯನ್ನು ಹೆಚ್ಚು ಒಳಗಾಗುವಂತೆ ಮಾಡಬಹುದು. ಈ ಕಾರಣದಿಂದ ನೈಸರ್ಗಿಕವಾಗಿ ಹೇಗಿದೆಯೋ ಹಾಗೆ ಇರಲು ಬಿಡುವುದು ಉತ್ತಮ.