ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದರ್ಶನ್ ಅವರನ್ನು ನೋಡಲು ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ.
ದರ್ಶನ್ ಜೈಲು ಪಾಲಾದ ನಂತರ ನಟ ಅಭಿಷೇಕ್ ಮೊದಲ ಬಾರಿಗೆ ಜೈಲಿಗೆ ಭೇಟಿ ನೀಡಿದ್ದಾರೆ. ಚಿತ್ರರಂಗದ ಏಳಿಗೆಗಾಗಿ ನಡೆಯುತ್ತಿರುವ ಪೂಜೆಯಲ್ಲಿ ಪಾಲ್ಗೊಂಡ ನಂತರ ಚಿಕ್ಕಣ್ಣ ಹಾಗೂ ಧನ್ವೀರ್ ಜೊತೆ ಅಭಿಷೇಕ್ ಜೈಲಿಗೆ ಭೇಟಿ ನೀಡಿದ್ದಾರೆ.