ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಶ್ರೀಲೀಲಾ ಡೇಟಿಂಗ್‌ನಲ್ಲಿರುವ ರೂಮರ್ ಎಲ್ಲಾ ಕಡೆ ಹರಡಿದೆ. ಈ ರೂಮರ್ ಮಧ್ಯೆ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಮ್ಮ ಕನ್ನಡದ ಹುಡುಗಿ ಬಾಲಿವುಡ್ ಸೊಸೆ ಆಗ್ತಿದ್ದಾಳೆ ಎಂದು ಕಮೆಂಟ್ ಮಾಡಿದ್ರು.
ಇದಕ್ಕೆ ಪುಷ್ಠಿ ನೀಡುವಂತಹ ಹೇಳಿಕೆಯೊಂದನ್ನು ಕಾರ್ತಿಕ್ ತಾಯಿ ನೀಡಿದ್ದಾರೆ. ಅವಾರ್ಡ್ ಫಂಕ್ಷನ್ ಒಂದರಲ್ಲಿ ನಿಮಗೆ ಎಂತಹ ಸೊಸೆ ಬೇಕು ಎಂದು ಕರಣ್ ಜೋಹರ್ ಕಾರ್ತಿಕ್ ತಾಯಿಯನ್ನು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ತಾಯಿ ನನಗೆ ಡಾಕ್ಟರ್ ಸೊಸೆ ಬೇಕು ಎಂದಿದ್ದಾರೆ. ನಟಿ ಶ್ರೀಲೀಲಾ ಕೂಡ ಎಂಬಿಬಿಎಸ್ ಸ್ಟೂಡೆಂಟ್ ಆಗಿದ್ದು, ಇಂಡೈರೆಕ್ಟ್ ಆಗಿ ಇವರಿಬ್ಬರ ಡೇಟಿಂಗ್ ವಿಷಯ ಹೊರಬಂದಂತೆ ಆಗಿದೆ.
ಸದ್ಯ ಶ್ರೀಲೀಲಾ ಹಾಗೂ ಕಾರ್ತಿಕ್ ಆಶಿಕಿ-3 ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇನ್ನು ಶ್ರೀಲೀಲಾ ಕಾರ್ತಿಕ್ ಫ್ಯಾಮಿಲಿ ಫಂಕ್ಷನ್‌ಗಳಲ್ಲಿಯೂ ಭಾಗಿಯಾಗ್ತಿದ್ದಾರೆ. ಆದರೆ ಈ ಬಗ್ಗೆ ಕಾರ್ತಿಕ್ ಅಥವಾ ಶ್ರೀಲೀಲಾ ಯಾವುದೇ ಸ್ಪಷ್ಟನೆ ನೀಡಿಲ್ಲ.