PARENTING | ಮಕ್ಕಳ ಜಂಕ್ ಫುಡ್ ತಿನ್ನೋ ಅಭ್ಯಾಸ ಹೆಚ್ಚಾಗಿದ್ಯಾ? ಈ ರೀತಿ ಮಾಡಿ ಅದನ್ನು ತಪ್ಪಿಸಬಹುದು..

ನಿಮ್ಮ ಮಕ್ಕಳ ಫೇವರೆಟ್ ಫುಡ್ ಯಾವುದು? ಪಿಝಾ, ಬರ್ಗರ್, ಪಾನಿಪುರಿ ಹೀಗೆ ಜಂಕ್‌ಫುಡ್‌ಗಳ ಲಿಸ್ಟ್‌ನ್ನೇ ನೀಡ್ತಾರೆ. ಆದರೆ ಇದು ಆರೋಗ್ಯಕರವಲ್ಲ, ನೀವು ನಿಮ್ಮ ಮಕ್ಕಳ ವಯಸ್ಸಿನವರಿದ್ದಾಗ ನಿಮಗೆ ಪಿಝಾ ಎಂದರೇನು ಎಂದೇ ತಿಳಿದಿರಲಿಲ್ಲ. ಮಕ್ಕಳನ್ನು ಜಂಕ್‌ಫುಡ್‌ನಿಂದ ದೂರ ಇರಿಸಿ ಅವರ ಆರೋಗ್ಯ ಕಾಪಾಡಿ..

  • ಜಂಕ್‌ಫುಡ್ ಯಾಕೆ ತಿನ್ನಬಾರದು? ಮಕ್ಕಳಿಗೆ ವಿವರಿಸಿ ಹೇಳಿ, ತಿಂದರೆ ಏನೆಲ್ಲಾ ಕೆಟ್ಟದಾಗುತ್ತದೆ ಎನ್ನುವುದನ್ನು ಹೇಳಿ.
  • ನೀವು ಅವರ ಉತ್ತಮ ರೋಲ್ ಮಾಡೆಲ್ ಆಗಿ. ಅವರೆದುರು ಜಂಕ್ ತಿನ್ನಬೇಡಿ, ಸಂಪೂರ್ಣ ಬಿಟ್ಟರೆ ನಿಮಗೂ ಒಳ್ಳೆಯದು.
  • ಸಣ್ಣ ಕಂದಮ್ಮಗಳಿರುವಾಗಲೇ ಅಭ್ಯಾಸ ತಪ್ಪಿಸುತ್ತಾ ಬನ್ನಿ, ದೊಡ್ಡವರಾದಮೇಲೆ ರುಚಿ ಹಿಡಿಯುತ್ತಾರೆ.
  • ಯಾವಾಗಲೂ ಏನಾದರೂ ಒಂದು ಆಕ್ಟಿವಿಟಿಯಲ್ಲಿ ಅವರನ್ನು ಸದಾ ಬ್ಯುಸಿಯಾಗಿ ಇಟ್ಟುಕೊಳ್ಳಿ
  • ಆಗಾಗ ನೀರನ್ನು ಕುಡಿಯಲು ಹೇಳಿ, ಹಸಿವಾಗೋದಿಲ್ಲ. ಊಟ ತಿಂಡಿ ಹೊಟ್ಟೆ ತುಂಬಾ ತಿನ್ನಿಸಿ
  • ಚೆನ್ನಾಗಿ ನಿದ್ದೆ ಮಾಡುವ ಮಕ್ಕಳಿಗೆ ಜಂಕ್ ಕ್ರೇವಿಂಗ್ ಕಡಿಮೆ
  • ನೀವೇ ಮನೆಯಲ್ಲಿಯೇ ಉತ್ತಮ ಪದಾರ್ಥಗಳನ್ನು ಬಳಸಿ ಅವರಿಷ್ಟದ ಜಂಕ್ ಫುಡ್ ತಯಾರಿಸಿಕೊಡಿ.
  • ಅಳೋದು ನಿಲ್ಸಿದ್ರೆ ಚಿಪ್ಸ್ ಕೊಡಿಸ್ತೀನಿ, ಓದ್ಕೊಂಡ್ರೆ ಕೇಕ್ ಕೊಡಿಸ್ತೀನಿ ಮಕ್ಕಳಿಗೆ ಈ ರೀತಿ ಆಸೆ ತೋರಿಸಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!