Monday, July 4, 2022

Latest Posts

ಚೀನಾದ ಟೆಸ್ಲಾ ಕಾರುಗಳ ಮಾರಾಟಕ್ಕೆ ಭಾರತದಲ್ಲಿ ಸಿಗಲಿದೆಯೇ ಅವಕಾಶ?: ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದ ಟೆಸ್ಲಾ ಕಂಪನಿಯ ಸ್ವಯಂಚಾಲಿತ ಕಾರಿಗೆ ಭಾರತದಲ್ಲಿ ಮಾರಾಟ ಮಾಡಲು ಸಿಗಲಿದೆಯೇ ಅವಕಾಶ ಎಂಬ ಗೊಂದಲಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಟೆಸ್ಲಾಗೆ ಸ್ವಾಗತ, ಆದರೆ, ಭಾರತದಲ್ಲಿ ಕಾರು ಮಾರಾಟ ಮಾಡಲು ಚೀನಾದಲ್ಲಿ ಅವುಗಳನ್ನು ತಯಾರು ಮಾಡುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಎಲೋನ್ ಮಸ್ಕ್ ಭಾರತದಲ್ಲಿ ಕಾರು ತಯಾರಿಸಲು ಸಿದ್ಧವಾಗಿದ್ದರೆ, ನಮ್ಮಲ್ಲಿ ಎಲ್ಲ ರೀತಿಯ ಸಾಮರ್ಥ್ಯ, ತಂತ್ರಜ್ಞಾನವಿದೆ. ಭಾರತದಲ್ಲೇ ಕಾರು ತಯಾರಿಸಿ ಎಂದು ನಾವು ಅವರಿಗೆ ಮನವಿ ಮಾಡುತ್ತೇವೆ. ಆದರೆ, ಅವರು ಚೀನಾದಲ್ಲಿ ಕಾರು ಉತ್ಪಾದಿಸಿ, ಭಾರತದಲ್ಲಿ ಮಾರಾಟ ಮಾಡಲು ಬಯಸಿದರೆ, ಅದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಟೆಸ್ಲಾ ಕಾರು ಮಾರಾಟ ಮಾಡಲು ಕಂಪನಿಗೆ ಸಾಧ್ಯವಾಗಿಲ್ಲ. ಈ ಹಿಂದೆ ಅನೇಕ ಬಾರಿ ಕಾರಿನ ಮೇಲಿನ ಸುಂಕ ಕಡಿತಗೊಳಿಸುವಂತೆ ದೆಹಲಿಯಲ್ಲಿ ಅಧಿಕಾರಿಗಳ ಬಳಿ ಲಾಬಿ ಮಾಡಿದೆ ಎಂದು ತಿಳಿಸಿದರು.ಒಂದು ವೇಳೆ ಟೆಸ್ಲಾ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ನಿರ್ಧಾರ ಕೈಗೊಂಡರೆ ಅದಕ್ಕೆ ನಾವು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧ. ಇದರಿಂದ ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ದೃಷ್ಟಿಕೋನಕ್ಕೂ ಸಹಕಾರಿಯಾಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss