Saturday, June 10, 2023

Latest Posts

ಪ್ಯಾಂಗಾಂಗ್ ಸರೋವರದಲ್ಲಿ ಚೀನಿಯರ ಸೇತುವೆ ನಿರ್ಮಾಣಕ್ಕೆ ಪ್ರಧಾನಿ ಮೌನ ಎಂಬ ರಾಹುಲ್ ಹೇಳಿಕೆಯಲ್ಲಿ ತರ್ಕವಿದೆಯೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್ ವಿಶ್ಲೇಷಣೆ:

ಪ್ಯಾಗಾಂಗ್ ಸರೋವರದಲ್ಲಿ ಚೀನಿಯರು ಸೇತುವೆ ನಿರ್ಮಾಣ ಕಾಮಗಾರಿ ನಡೆಸಿರುವ ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿ ಟೀಕಿಸಿದ್ದಾರೆ. ರಜಾಕಾಲದ ರಾಜಕಾರಣಿ ರಾಹುಲ್ ಮಾತುಗಳನ್ನು ದೇಶ ಗಂಭೀರವಾಗಿ ತೆಗೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಪ್ರಸ್ತುತವೇ ಆದರೂ ಅವರ ಕುಹಕ ವಿಷಯದ ಬಗ್ಗೆ ತಪ್ಪು ಗ್ರಹಿಕೆ ಕಟ್ಟಿಕೊಡುವಂತಿದ್ದರೆ ಅದನ್ನು ವಿಶ್ಲೇಷಿಸುವುದು ದೇಶಹಿತದ ದೃಷ್ಟಿಯಿಂದ ಅನಿವಾರ್ಯ.

ರಾಹುಲ್ ಗಾಂಧಿ ಟ್ವೀಟ್ ಸಾರ

“ಚೀನಿಯರ ನಿರ್ಮಾಣ ಕಾಮಗಾರಿಯ ಬಗ್ಗೆ ಪ್ರಧಾನಿ ಮೌನ ಕಿವಿಗಪ್ಪಳಿಸುವಂತಿದೆ. ನಮ್ಮ ನೆಲ, ಜನ ಹಾಗೂ ಗಡಿಪ್ರದೇಶಗಳು ಇನ್ನೂ ಉತ್ತಮವಾದುದನ್ನು ಪಡೆಯಬೇಕು.”

ಈ ಟೀಕೆಯಲ್ಲಿ ತರ್ಕವಿದೆಯೇ?

  • ಮೊದಲನೆಯದಾಗಿ ಚೀನಾ ಪ್ಯಾಂಗಾಗ್ ಸರೋವರದಲ್ಲಿ ಸೇತುವೆ ನಿರ್ಮಿಸುತ್ತಿರುವ ಭಾಗ ಫಿಂಗರ್ 8 ಪ್ರದೇಶಕ್ಕಿಂತ ಆಚೆಯದ್ದು. ಅದು 1958ರಿಂದಲೇ ಚೀನಿ ಹಿಡಿತದಲ್ಲಿದೆ. ಹಾಗಾದರೆ ಆ ಸಮಯದಲ್ಲಿ ಅಧಿಕಾರ ಸೂತ್ರ ಹಿಡಿದಿದ್ದವರಾರು?
  • ಪ್ಯಾಂಗಾಂಗ್ ಸರೋವರ 135 ಕಿ.ಮೀ ಉದ್ದವಿದೆ. ಇದರಲ್ಲಿ ಮುಕ್ಕಾಲು ಪಾಲು ಇರುವುದು ಚೀನಾ ಹಿಡಿತದಲ್ಲೇ. ಅಲ್ಲಿ ಅವರು ಏನೇ ಮಾಡಿಕೊಂಡರೂ ಭಾರತದ ಪ್ರಧಾನಿ ಆ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ.
  • ಭಾರತ ಮಾಡಬಹುದಾಗಿದ್ದೇನೆಂದರೆ ನಮ್ಮ ಗಡಿ ಭಾಗದಲ್ಲಿ ಮೂಲಸೌಕರ್ಯಗಳನ್ನು ವೃದ್ಧಿಸಿ, ನಾಗರಿಕ ಹಾಗೂ ಮಿಲಿಟರಿ ಸಂಪರ್ಕಜಾಲಕ್ಕೆ ಅನುವು ಮಾಡಿಕೊಡುವುದು. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಅವಗಣನೆಗೆ ಒಳಗಾಗಿದ್ದ ಈ ಕೆಲಸಗಳನ್ನು ಮೋದಿ ಸರ್ಕಾರ ಶರವೇಗದಲ್ಲಿ ಮಾಡುತ್ತಿದೆ. ಗಡಿಭಾಗಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಎಲ್ಲ ಅನುಕೂಲಗಳಾಗಿವೆ.

  • ಅಂದಹಾಗೆ, ರಾಹುಲ್ ಗಾಂಧಿಯವರ ಕಾಂಗ್ರೆಸ್ ಚೀನಾದ ಆಡಳಿತಾರೂಢ ಪಕ್ಷದ ಜತೆ ಪಕ್ಷದ ಮಟ್ಟದಲ್ಲಿ ಸಹಿ ಹಾಕಿಕೊಂಡಿರುವ ಒಡಂಬಡಿಕೆ ಅಂಶಗಳು ಏನು ಎಂಬುದು ಇಂದಿಗೂ ನಿಗೂಢ. ವಾಸ್ತವದಲ್ಲಿ ಈ ಕುರಿತ ರಾಹುಲ್ ಗಾಂಧಿ ಮೌನ ಕಿವಿಗಡಚಿಕ್ಕುವಂತಿದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!