ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೋನು ಸೂದ್ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ.
ಇದೀಗ ಸೋನು ತಮ್ಮ ಹುಟ್ಟೂರಾದ ಮೊಗಾದಲ್ಲಿ ಹೆಣ್ಣುಮಕ್ಕಳಿಗೆ ಸಾವಿರ ಸೈಕಲ್ ನೀಡಿದ್ದಾರೆ.
ಸಹೋದರಿ ಮಾಳಾವಿಕಾ ಸೂದ್ ಹಾಗೂ ಸೋನು ಮೊಗಾದಲ್ಲಿನ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಉಚಿತವಾಗಿ ಸೈಕಲ್ ನೀಡಿದ್ದಾರೆ.
ಎಷ್ಟೆಷ್ಟೋ ದೂರದಿಂದ ಶಾಲೆಗೆ ವಿದ್ಯಾರ್ಥಿನಿಯರು ಬರುತ್ತಿದ್ದು, ಅವರಿಗೆ ಸಹಾಯ ಮಾಡಲು ಸೋನು ನಿರ್ಧರಿಸಿದ್ದರು. ಇದಕ್ಕೆ ಮಾಳಾವಿಕಾ ಕೂಡ ಸಾಥ್ ನೀಡಿದ್ದು, ಶಿಕ್ಷಕರ ಸಹಾಯದಿಂದ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಸಾವಿರ ಸೈಕಲ್ ವಿತರಿಸಿದ್ದಾರೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಸಾಮಾಜಿಕ ಕಾರ್ಯಕರ್ತೆಯರಿಗೂ ಸೈಕಲ್ ನೀಡಲಾಗಿದೆ.
ಸೂದ್ ಚಾರಿಟಿ ಫೌಂಡೇಶನ್‌ನಿಂದ ಸೈಕಲ್ ವಿತರಿಸಲಾಗಿದ್ದು, ಸೈಕಲ್ ಪಡೆದ ವಿದ್ಯಾರ್ಥಿನಿಗಳು ಸೋನು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಮುಂದೆ ಸರಾಗವಾಗಿ ಶಾಲೆಗೆ ತೆರಳಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.