ಇವರಾ ಜಾನ್ವಿ ಕಪೂರ್ ಬಾಯ್‌ಫ್ರೆಂಡ್? ಜಾನ್ವಿ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಜಾನ್ವಿ ಕಪೂರ್ ವಿಜಯ ದೇವರಕೊಂಡ ಜೊತೆ ಡೇಟಿಂಗ್‌ನಲ್ಲಿದ್ದರು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ವಿಜಯ್ ನನ್ನ ಫ್ರೆಂಡ್ ಅಷ್ಟೇ ಎಂದು ಹೇಳಿ ಜಾನ್ವಿ ಸುಮ್ಮನಾಗಿದ್ದರು.

ಇದೀಗ ಜಾನ್ವಿ ಜೊತೆ ಇನ್ನೊಂದು ಹೆಸರು ಕೇಳಿಬರುತ್ತಿದೆ. ಓರ್ಹಾನ್ ಅವತ್ರಮಣಿ ಜೊತೆ ಜಾನ್ವಿ ಹೆಚ್ಚು ಕಾಣಿಸುತ್ತಿದ್ದಾರೆ. ಆದರೆ ಇವರು ಜಾನ್ವಿ ಬಾಯ್‌ಫ್ರೆಂಡ್ ಹೌದಾ?

ಓರ್ಹಾನ್ ನನಗೆ ಹಳೆ ಪರಿಚಯ, ನನ್ನ ಬೆಂದ ಹಿಂದೆ ನಿಂತಿದ್ದಾರೆ, ಇಂಥವರು ಸಿಗೋದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ಇಷ್ಟೇ ಹೇಳಿ, ಅವರು ಬಾಯ್‌ಫ್ರೆಂಡ್ ಹೌದೋ ಅಲ್ಲವೋ ಅನ್ನೋದಕ್ಕೆ ಉತ್ತರ ನೀಡಿಲ್ಲ ಜಾನ್ವಿ.

ಜಾನ್ವಿ ಕಪೂರ್ ಹುಟ್ಟಿದ ಹಬ್ಬದಂದು ಓರ್ಹಾನ್ ನಿನಗೆ ಅತ್ಯುತ್ತಮವಾದದನ್ನು ಬಯಸುತ್ತೇನೆ. ಪ್ರಪಂಚವು ನೀಡುವ ಎಲ್ಲಾ ಪ್ರೀತಿ, ಸಂತೋಷ ನಿನಗೆ ಸಿಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಏನಂದ್ರು?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!