ಟ್ವಿಟರ್‌ನಲ್ಲಿ ಬ್ಲ್ಯೂ ಟಿಕ್‌ಗೆ ಶುಲ್ಕ, ಶೀಘ್ರ ಭಾರತದಲ್ಲೂ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟರ್‌ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲ್ಯೂಟಿಕ್‌ಗೆ ಎಲಾನ್ ಮಸ್ಕ್ ಶುಲ್ಕ ವಿಧಿಸಿದ್ದಾರೆ.
ಹಲವು ದೇಶಗಳಲ್ಲಿ ಈಗಾಗಲೇ ಬ್ಲ್ಯೂಟಿಕ್‌ಗೆ ಶುಲ್ಕ ಜಾರಿಯಾಗಿದೆ. ಭಾರತದಲ್ಲಿಯೂ ಶೀಘ್ರದಲ್ಲಿಯೇ ಶುಲ್ಕ ವಿಧಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಎಲಾನ್ ಮಸ್ಕ್ ಅವರಿಗೆ ವ್ಯಕ್ತಿಯೊಬ್ಬರು ಭಾರತದಲ್ಲಿ ಶುಲ್ಕದ ಬಗ್ಗೆ ಪ್ರಶ್ನೆ ಇಟ್ಟಿದ್ದರು. ಇದಕ್ಕೆ ಎಲಾನ್ ಮಸ್ಕ್ ಉತ್ತರಿಸಿದ್ದು, ಇನ್ನೇನು ಒಂದು ತಿಂಗಳಲ್ಲಿ ಭಾರತದಲ್ಲಿಯೂ ಶುಲ್ಕ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಬ್ಲ್ಯೂ ಟಿಕ್‌ಗೆ ಹಣ ಪಾವತಿಸಲು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿರೋಧಗಳ ನಡುವೆಯೂ ಎಲಾನ್ ಮಸ್ಕ್ ನೀತಿ ಜಾರಿಗೆ ತಂದಿದ್ದು, ಶುಲ್ಕ ನೀತಿ ವಾಪಸ್ ಆಗುವುದಿಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!