ಇದೇನಾ ನಾರಿ ಶಕ್ತಿಯೇ?: ಹೆಂಡತಿ ಹಿಂಸೆ ತಾಳಲಾರದೇ ಪ್ರಧಾನಿ ಮೋದಿಗೆ ಮೊರೆಯಿಟ್ಟ ಪತಿರಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಡ ಹೆಂಡತಿಯ ಜಗಳ ಸಹಜ. ಆದರೆ ಇಲ್ಲಿ ಹೆಂಡತಿ ಹಿಂಸೆ ತಾಳಲಾರದೇ ಬೆಂಗಳೂರಿನ ಪತಿಯೊಬ್ಬ ಪ್ರಧಾನಿ ಮೋದಿಗೆ ಸಹಾಯಕ್ಕೆ ಮೊರೆಯಿಟ್ಟ ಘಟನೆ ವರದಿಯಾಗಿದೆ.
ರಾಜಧಾನಿ ಬೆಂಗಳೂರಿನ ಟೆಕ್ಕಿ ಯದುನಂದನ್ ಆಚಾರ್ಯ ಪತ್ನಿಯಿಂದ ರಕ್ಷಣೆ ಕೋರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ.

ತನ್ನ ಹೆಂಡತಿ ನಿರಂತರವಾಗಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಮತ್ತು ಕೊಲೆ ಬೆದರಿಕೆ ಹಾಕುತ್ತಾಳೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವ್ಯಕ್ತಿ ಪಿಎಂಒ ಅಧಿಕೃತ ಹ್ಯಾಂಡಲ್‌ಗೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿದ್ದಾರೆ.

‘ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ, ಇದು ನೀವು ಉತ್ತೇಜಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಾಕಬಹುದೇ? ಇಲ್ಲವೇ ಎನ್ನುವುದನ್ನು ತಿಳಿಸಿ’ ಎಂದು ವ್ಯಕ್ತಿ ಪತ್ರದಲ್ಲಿ ಬರೆದುಕೊಂಡಿದ್ದಾನೆ.

ಅವರ ಟ್ವೀಟ್‌ಗೆ ಉತ್ತರಿಸಿದ ಪೊಲೀಸ್ ಆಯುಕ್ತರು, ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಯದುನಂದನ್ ಆಚಾರ್ಯ ಅವರು ಸಹಾಯ ಯಾಚಿಸಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯದುನಂದನ್ ಆಚಾರ್ಯ ಅವರಿಗೆ ಎಲ್ಲಾ ವರ್ಗಗಳ ಬೆಂಬಲ ಸಿಕ್ಕಿದ್ದು, ಕಿರುಕುಳಕ್ಕೊಳಗಾದ ಗಂಡಂದಿರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!