September 28, 2026
Monday, September 28, 2026
spot_img

ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ಬ್ಯಾಡ್ ಸ್ಮೆಲ್ ಬರುತ್ತಿದೆಯೇ? ಇಲ್ಲಿದೆ ಸಿಂಪಲ್ ಪರಿಹಾರ

ಮಳೆಗಾಲದಲ್ಲಿ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿರುತ್ತದೆ. ಫ್ರಿಡ್ಜ್ ಪದೇ ಪದೇ ತೆರೆಯುವುದರಿಂದ ಹೊರಗಿನ ತೇವಾಂಶವುಳ್ಳ ಗಾಳಿ ಒಳಗೋಗಿ, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳು ಸುಲಭವಾಗಿ ಬೆಳೆಯುತ್ತವೆ. ಇದು ದುರ್ವಾಸನೆಗೆ ಮುಖ್ಯ ಕಾರಣ.

ಆಹಾರ ಪದಾರ್ಥಗಳು ಬೇಗನೆ ಹಾಳಾಗುವುದು

ಹೆಚ್ಚಿನ ತೇವಾಂಶದ ಕಾರಣ ಫ್ರಿಡ್ಜ್‌ನೊಳಗಿಟ್ಟ ತರಕಾರಿ, ಹಣ್ಣು ಹಾಗೂ ಹಸಿ ಮಾಂಸಗಳು ಬೇಗನೆ ಕೊಳೆಯಲು ಆರಂಭಿಸುತ್ತವೆ. ನಾವು ಗಮನಿಸದೆ ಹಾಗೇ ಬಿಟ್ಟಾಗ ಅವುಗಳಿಂದ ತೀವ್ರವಾದ ಕೆಟ್ಟ ವಾಸನೆ ಹೊರಬರುತ್ತದೆ.

ವಿದ್ಯುತ್ ಕೈಕೊಡುವುದು

ಮಳೆಗಾಲದಲ್ಲಿ ಕರೆಂಟ್ ಹೋಗುವುದು ಸಾಮಾನ್ಯ. ದೀರ್ಘಕಾಲ ವಿದ್ಯುತ್ ಇಲ್ಲದಿದ್ದಾಗ ಫ್ರಿಡ್ಜ್‌ನೊಳಗಿನ ತಾಪಮಾನ ಏಕೆಯಾಗಿ, ಶೇಖರಿಸಿಟ್ಟ ಹಾಲು, ಮೊಸರು ಅಥವಾ ಇತರೆ ಬೇಯಿಸಿದ ಆಹಾರಗಳು ಬೇಗನೆ ಕೆಟ್ಟು ವಾಸನೆ ಬೀರುತ್ತವೆ.

ಏರ್‌ ಸರ್ಕ್ಯುಲೇಶನ್‌ ಕೊರತೆ

ಫ್ರಿಡ್ಜ್‌ನಲ್ಲಿ ಅತಿಯಾಗಿ ಸಾಮಗ್ರಿಗಳನ್ನು ತುರುಕುವುದರಿಂದ ಒಳಗೆ ತಂಪಾದ ಗಾಳಿಯ ಸಂಚಾರ ಸರಿಯಾಗಿ ಆಗುವುದಿಲ್ಲ. ಇದು ಕೂಡ ಬ್ಯಾಕ್ಟೀರಿಯಾಗಳ ವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಫ್ರಿಡ್ಜ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಒಂದು ಸಣ್ಣ ಬಟ್ಟಲಿನಲ್ಲಿ ಅಡುಗೆ ಸೋಡಾ ಅಥವಾ ನಿಂಬೆಹಣ್ಣಿನ ರಸವನ್ನು ಇಡುವುದರಿಂದ ದುರ್ವಾಸನೆಯನ್ನು ಸುಲಭವಾಗಿ ತಡೆಯಬಹುದು.

Must Read