ಬಾಂಗ್ಲಾ ವಿರುದ್ಧ ಇಶಾನ್ ಕಿಶನ್ ಸಿಡಿಲಬ್ಬರದ ಶತಕ! ಸ್ಫೋಟಕ ಆಟಕ್ಕೆ ತಬ್ಬಿಬ್ಬಾದ ಬೌಲರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬಾಂಗ್ಲಾದೇಶ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದು, ಇಶಾನ್‌ ಅಬ್ಬರಕ್ಕೆ ಬಾಂಗ್ಲಾ ಬೌಲರ್‌ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಹೆಬ್ಬೆರಳಿನ ಗಾಯದಿಂದಾಗಿ ನಾಯಕ ರೋಹಿತ್ ಶರ್ಮಾ ಹೊರಬಿದ್ದಿದ್ದರಿಂದ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ 24 ವರ್ಷದ ಆಟಗಾರ ಇಶಾನ್‌ ಕಿಶಾನ್‌ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದರು.
ಇಶಾನ್‌ ಕಿಶನ್‌ ಸಧ್ಯ 113 ಎಸೆಗಳಲ್ಲಿ 9 ಸಿಕ್ಸರ್‌, 21 ಬೌಂಡರಿಗಳಿರುವ 183 ರನ್‌ ಸಿಡಿಸಿ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾರೆ.
ತಕ್ಕ ಸಾಥ್‌ ನೀಡಿರುವ ವಿರಾಟ್‌ ಕೊಹ್ಲಿ 59 ರನ್‌ ಸಿಡಿಸಿ ಸಾಥ್‌ ನೀಡಿದ್ದಾರೆ. ಇವರಿಬ್ಬರು 236 ರನ್‌ ಗಳ ಜೊತೆಯಾಟವಾಡಿದ್ದು, ಭಾರತ 30.3 ಓವರ್‌ ಗಳಲ್ಲಿ 251 ರನ್‌ ಕಲೆಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!