SRH ಪರ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಇಶಾನ್: ರಾಜಸ್ಥಾನಕ್ಕೆ 287 ರನ್​​​ಗಳ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನ್ ರಾಯಲ್ಸ್​ ವಿರುದ್ಧ ಪಂದ್ಯದಲ್ಲಿ ಹೈದ್ರಾಬಾದ್ ಬ್ಯಾಟ್ಸ್ ಮ್ಯಾನ್ ಗಳು ಅಬ್ಬರಿಸಿದ್ದಾರೆ. 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್​​ಗಳ ಬೃಹತ್ ಮೊತ್ತ ದಾಖಲಿಸಿದೆ.

ಎಂದಿನಂತೆ ಟ್ರಾವಿಸ್ ಹೆಡ್ ​​(67) ಸ್ಫೋಟಕ ಅರ್ಧಶತಕ ಸಿಡಿಸಿದರೆ, ಇದೇ ಆವೃತ್ತಿಯಲ್ಲಿ ಹೈದರಾಬಾದ್ ಸೇರಿರುವ ಇಶಾನ್ ಕಿಶನ್ ಅಜೇಯ ಶತಕ(106) ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಮೊದಲ ವಿಕೆಟ್​​ಗೆ ಅಭಿಷೇಕ್ ಶರ್ಮಾ11 ಎಸೆತಗಳಲ್ಲಿ 5 ಬೌಂಡರಿ ಸಹಿತ 24 ರನ್​ ಸಿಡಿಸಿ ಔಟ್ ಆದರು. ಬಳಿಕ ಹೆಡ್ ಮತ್ತು ಕಿಶನ್ 2ನೇ ವಿಕೆಟ್​​ಗೆ 39 ಎಸೆತಗಳಲ್ಲಿ 89 ರನ್​ ಸೂರೆಗೈದರು. ಹೆಡ್​ 31 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 67 ರನ್​ಗಳಿಸಿ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು.

ನಂತರ 3ನೇ ವಿಕೆಟ್​ಗೆ ಕಿಶನ್ ಜೊತೆಗೂಡಿದ ಲೋಕಲ್ ಬಾಯ್ ನಿತೀಶ್ ರೆಡ್ಡಿ ಕೇವಲ 29 ಎಸೆತಗಳಲ್ಲಿ 72 ರನ್​ ಸೇರಿಸಿದರು. ರೆಡ್ಡಿ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 33 ರನ್​ಗಳಿಸಿ ಔಟ್ ಆದರು. 3ನೇ ಕ್ರಮಾಂಕದಿಂದ ಕೊನೆಯ ಓವರ್​ವರೆಗೂ ಅಜೇಯರಾಗಿ ಉಳಿದ ಇಶಾನ್ ಕಿಶನ್ ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಗಳ ಸಹಿತ ಅಜೇಯ ಶತಕ ಸಿಡಿಸಿ ಮಿಂಚಿದರು. 45 ಎಸೆತಗಳಲ್ಲಿ ಶತಕ ಸಿಡಿಸಿದ ಇಶಾನ್ ಕಿಶನ್ ಒಟ್ಟಾರೆ 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್​ಗಳ ನೆರವಿನಿಂದ ಅಜೇಯ 106 ರನ್​ ಸಿಡಿಸಿದರು. ಹೆನ್ರಿಚ್ ಕ್ಲಾಸೆನ್ 14 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 34 ರನ್​ ಸಿಡಿಸಿ ಕೊನೆಯಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!