ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್‌, ‌ಇಂದು ಇನ್ನೊಬ್ಬ ಸ್ಪರ್ಧಿ ಎಲಿಮಿನೇಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಆರನೇ ವಾರದಲ್ಲಿ ಬಿಗ್‌ಬಾಸ್ ಮನೆಯಿಂದ ರ್ಯಾಪರ್ ಇಶಾನಿ‌ ಔಟ್‌ ಆಗಿದ್ದಾರೆ. ಇಂದು ಇನ್ನೊಬ್ಬ ಸ್ಪರ್ಧಿ ಎಲಿಮಿನೇಟ್‌ ಆಗಲಿದ್ದು, ಮತ್ತೊಬ್ಬ ಸ್ಪರ್ಧಿ ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಶನಿವಾರ ನಡೆದ ಸಂಚಿಕೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಸುದೀಪ್‌ ಹೇಳಿದ್ದರು.

ಶನಿವಾರದ ಸಂಚಿಕೆಯಲ್ಲಿ ರ್ಯಾಪರ್ ಇಶಾನಿ‌ ಮನೆಯಿಂದ ಹೊರನಡೆದಿದ್ದು, ಭಾನುವಾರದ ಎಪಿಸೋಡ್‍ನಲ್ಲಿ ಮತ್ತೊಬ್ಬ ಸ್ಪರ್ಧಿ ಬಿಗ್‍ಬಾಸ್ ಮನೆಯಿಂದ ಹೊರನಡೆಯಲಿದ್ದಾರೆ. ಈ ವಾರ ಎಲಿಮಿನೇಟ್‌ ಆಗುವ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಎಪಿಸೋಡ್‍ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!