ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವಿಶ್ವಕಪ್ ಫೈನಲ್‌ಗೆ ಅಹಮಾದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಮೈದಾನದಲ್ಲಿ ಸೆಣಸಾಡಲಿದ್ದು, ಎಲ್ಲರ ಚಿತ್ತ ಇದೀಗ ಫೈನಲ್ ಪಂದ್ಯದತ್ತ ನೆಟ್ಟಿದೆ. ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಭಾರತದ ಗೆಲುವಿಗಾಗಿ ಹಾರೈಸಿದ್ದಾರೆ.
ಭಾರತದ ಮೂಲೆ ಮೂಲೆಯಲ್ಲೂ ʻಗೆದ್ದು ಬಾ ಭಾರತದʼ ಭಾರತದ ಕೂಗು ಕೇಳಿಬರುತ್ತಿದ್ದು, ಪ್ರಮುಖ ದೇವಾಲಯಗಳಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಪೂಜೆ, ಹೋವ-ಹವನಗಳು ನಡೆಯುತ್ತಿವೆ. ಚಿಣ್ಣರಿಂದ ಹಿಡಿದು ಹಿರಿಯರು ಕಿರಿಯರು ಎಂಬ ಬೇಧ-ಭಾವವಿಲ್ಲದೆ ಭಾರತದ ಗೆಲುವಿಗಾಗಿ ಕಾಯುತ್ತಿದ್ದಾರೆ.
ಇನ್ನು ಪಂದ್ಯ ಶುರುವಾಗಲು ಕೆಲವೇ ಗಂಟೆಗಳು ಬಾಕಿಯಿದ್ದು, ಕ್ರೀಡಾಂಗಣದ ಬಳಿ ಭಾರೀ ಜನಸ್ತೋಮ ನೆರೆದಿದೆ. ತಡರಾತ್ರಿಯಿಂದಲೇ ಅಭಿಮಾನಿಗಳು ಮೈದಾನದತ್ತ ಮುಖ ಮಾಡಿದ್ದು, ಸೆಲೆಬ್ರಟಿಗಳು, ರಾಜಕೀಯ ಗಣ್ಯರು ಪಂದ್ಯ ನೋಡಲು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಆರು ಸಾವಿರ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕ್ರೀಡಾಂಗಣದ ಬಳಿ ಕಣ್ಣು ಹಾಯಿಸಿದಷ್ಟೂ ತ್ರಿವರ್ಣ ಧ್ವಜ, ಟೀಂ ಇಂಡಿಯಾ ಜರ್ಸಿಗಳೇ ಕಾಣುತ್ತಿವೆ. ಕೇರಳದಲ್ಲಿ ಭಾರತದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲು ಜನರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಟೀಂ ಇಂಡಿಯಾ ಗೆಲುವಿಗಾಗಿ ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಅಮ್ರೋಹಾ ಗ್ರಾಮದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಟೀಂ ಇಂಡಿಯಾ ಗೆಲುವಿಗೆ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಶುಭ ಹಾರೈಸಿದೆ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.