ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹ: ಅಥಣಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ದಿಗಂತವರದಿ ಅಥಣಿ:

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ಪಟ್ಟಣದ ತಾಲೂಕು ಆಡಳಿತ ಕಛೇರಿ ಬಳಿ ಕಾಂಗ್ರೆಸ್ ನ ಮುಖಂಡ ಗಜಾನನ ಮಂಗಸೂಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಸಚಿವ ಈಶ್ವರಪ್ಪ ಕೇಸರಿ ಧ್ವಜ ಹಾರಿಸುವ ವಿಚಾರ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ಅವರನ್ನು ಸ್ಥಾನದಿಂದ ವಜಾಗೊಳಿಸುವಂತೆ ತಹಶಿಲ್ದಾರರ ಮೂಲಕ ರಾಜ್ಯ ಪಾಲರಿಗೆ ಮನವಿಸಲ್ಲಿಸಿದರು.

ಇನ್ನು ರಾಷ್ಟ್ರ ಧ್ವಜ ಇರುವಲ್ಲಿ ಕೇಸರಿ ಧ್ವಜ ಹಾರಿಸುತ್ತೆವೆ ಎಂಬ ಅರ್ಥದಲ್ಲಿ ರಾಷ್ಟ್ರ ಧ್ವಜ ಅಪಮಾನ ಮಾಡಿದ್ದು ಕೂಡಲೆ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚೀವ ಈಶ್ವರಪ್ಪಾ ಅವರನ್ನು ಸಚಿವ ಸ್ಥಾನ ದಿಂದ ವಾಜಾಗೊಳಿ, ದೇಶ ದ್ರೋಹಿ ಕೇಸ್ ಧಾಕಲಿಸುವಂತೇ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದರು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಹಲವರು ಬಿ.ಜೆ.ಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!