ನಡುರಸ್ತೆಯಲ್ಲೇ ವಿಲವಿಲ ಪ್ರಾಣಬಿಟ್ಟ ಭಾರತಕ್ಕೆ ಅತೀ ಹೆಚ್ಚು ನಕಲಿ‌ ನೋಟು ಪೂರೈಸುತ್ತಿದ್ದ ಐಎಸ್ ಐ ಏಜೆಂಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಕಲಿ ನೋಟು ಪೂರೈಕೆ ರೂವಾರಿ,‌ ಪಾಕಿಸ್ತಾನದ ಐಎಸ್‌ ಐ ಏಜೆಂಟ್‌ ಲಾಲ್ ಮೊಹಮದ್ ನನ್ನು ಅಪರಿಚಿತ ಬಂದೂಕುಧಾರಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ನೇಪಾಳದ ಕಟ್ಮಂಡುವಿನಲ್ಲಿ ಈ ಘಟನೆ ನಡೆದಿದ್ದು, ದೃಶ್ಯಾವಳಿಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿವೆ.

ಐಎಸ್‌ ಐ ಏಜೆಂಟ್‌ ಲಾಲ್‌ ಮೊಹಮದ್‌ (55) ಅಲಿಯಾಸ್‌ ಮೊಹಮದ್‌ ಧೀರಜ್, ತನ್ನ ಐಷಾರಾಮಿ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಹಿಂದಿನಿಂದ ಬಂದ ಬಂದೂಕುಧಾರಿಗಳು ಆತನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಸುವ ಆತನ ಪ್ರಯತ್ನ ವಿಫಲವಾಗಿದೆ.

ಈತ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ತಯಾರಿಸುತ್ತಿದ್ದ ನಕಲಿ ನೋಟುಗಳನ್ನು ನೇಪಾಳಕ್ಕೆ ರವಾನಿಸಿ, ಅಲ್ಲಿಂದ ಭಾರತಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!