ಐಎಸ್‌ಐನಿಂದ ಹೊಸ ತಂತ್ರ: ಭಾರತ ವಿರೋಧಿ ಚಟುವಟಿಕೆಗಳಿಗೆ ಡ್ರೋನ್‌ ಕೇಂದ್ರಗಳ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)ಯು ಭಾರತ ವಿರೋಧಿ ಚಟುವಟಿಕೆಗಳಿಗೆ ಹೊಸ ತಂತ್ರ ರೂಪಿಸಿದ್ದು ಡ್ರೋನ್‌ ಕೇಂದ್ರ ಗಳನ್ನು ಸ್ಥಾಪಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಈ ಡ್ರೋನ್‌ ಕೇಂದ್ರಗಳನ್ನು ಭಾರತಕ್ಕೆ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯ ಇನ್ನೊಂದು ಬದಿಯಲ್ಲಿ ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ಸಹಾಯದಿಂದ ಡ್ರೋನ್ ಕೇಂದ್ರಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಫಿರೋಜ್‌ಪುರ ಮತ್ತು ಅಮೃತಸರದ ಗಡಿ ಭಾಗದಲ್ಲಿ ಹಲವಾರು ಪಾಕಿಸ್ತಾನಿ ಗಡಿ ಔಟ್‌ಪೋಸ್ಟ್‌ಗಳಲ್ಲಿ ಡ್ರೋನ್ ಚಟುವಟಿಕೆಯನ್ನು ಹೆಚ್ಚಿಸಲಾಗಿರುವ ಕುರಿತು ಗುಪ್ತಚರ ಮಾಹಿತಿ ದೊರೆತಿದೆ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮೂಲಗಳು ತಿಳಿಸಿವೆ.
ಪಾಕಿಸ್ತಾನವು ಶಸ್ತ್ರಾಸ್ತ್ರಗಳು, ಡ್ರಗ್ಸ್ ಮತ್ತು ಸ್ಫೋಟಕಗಳಿಗಾಗಿ ‘ಡಮ್ಮಿ ಡ್ರೋನ್’ಗಳನ್ನು ಬಳಸುತ್ತಿದೆ. ಖೇಮಕರನ್ ಬಳಿಯ ಗಡಿಯುದ್ದಕ್ಕೂ ಕಳ್ಳಸಾಗಾಣಿಕೆದಾರರು ಪಾಕ್ ರೇಂಜರ್‌ಗಳ ಸಹಾಯದಿಂದ ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಪಂಜಾಬ್ ಗಡಿಯಲ್ಲಿರುವ ನಿರ್ದಿಷ್ಟ, ಸೂಕ್ಷ್ಮ ಸ್ಥಳಗಳಲ್ಲಿ ಆಂಟಿ-ಡ್ರೋನ್ ಸಿಸ್ಟಮ್‌ಗಳನ್ನು ಸ್ಥಾಪಿಸುತ್ತಿದೆ. ಶತ್ರು ಯುಎವಿಗಳನ್ನು ಹೊಡೆದುರುಳಿಸಲು ‘ಡ್ರೋನ್ ಬೇಟೆ ತಂಡಗಳನ್ನು’ ನಿಯೋಜಿಸಲಾಗಿದೆ.

ವರದಿಗಳ ಪ್ರಕಾರ ಇದುವರೆಗೆ ಸುಮಾರು 53 ಡ್ರೋನ್‌ ಗಳನ್ನು ಹೊಡೆದುರುಳಿಸಲಾಗಿದೆ. 9 ಯುಎವಿ (ಮಾನವರಹಿತ ವೈಮಾನಿಕ ವಾಹನ) ಗಳನ್ನು ನಾಶಪಡಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪಂಜಾಬ್ ಗಡಿಯಲ್ಲಿಸುಮಾರು 1,150 ಕೆಜಿ ಡ್ರಗ್ಸ್ಅನ್ನು ಗಡಿ ಭದ್ರತಾ ಪಡೆಗಳು ವಶಪಡಿಸಿ ಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!