ಸ್ವಂತ ಮಕ್ಕಳಿಗೆ ಹಿಂಸೆ ನೀಡಿ ಉಗ್ರರನ್ನಾಗಿಸಿದ್ದ ಐಸಿಸ್ ಭಯೋತ್ಪಾದಕಿಗೆ 20 ವರ್ಷ ಜೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ಸಿರಿಯಾದಲ್ಲಿದ್ದುಕೊಂಡು ಮಹಿಳಾ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಗುಂಪಿನ ನೇತೃತ್ವ ವಹಿಸಿದ್ದ ಕಾನ್ಸಾಸ್ ಮೂಲದ ಮಹಿಳೆಗೆ 20ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಅಪರಾಧಕ್ಕೆ ನೀಡುವ ಗರಿಷ್ಠ ಮಟ್ಟದ ಜೈಲು ಶಿಕ್ಷೆ ಇದಾಗಿದೆ. ಅಪರಾಧಿ ಆಲಿಸನ್ ಫ್ಲೂಕ್ ಎಕ್ರೇನ್ ವಿರುದ್ಧ ಸ್ವಂತ ಮಕ್ಕಳೇ ಸಾಕ್ಷಿ ಹೇಳಿದ್ದಾರೆ. ತಮ್ಮ ತಾಯಿ ಚಿತ್ರಹಿಂಸೆ ನೀಡುತ್ತಿದ್ದರ ಬಗ್ಗೆ ಹೇಳಿದ್ದಾರೆ.

ಆಲಿಸನ್ ಖತೀಬಾ ನುಸೈಬಾ ಎಂಬ ಬೆಟಾಲಿಯನ್‌ನ ನೇತೃತ್ವ ವಹಿಸಿಕೊಂಡಿದ್ದರು. ಇದರಲ್ಲಿ 100 ಮಹಿಳೆಯರು ಇದ್ದರು.10  ವರ್ಷದ ಬಾಲಕಿಯರೂ ಈ ಕ್ಯಾಂಪ್‌ನಲ್ಲಿದ್ದು, ಅವರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸುವ ಬಗೆ ತಿಳಿಸಲಾಗುತ್ತಿತ್ತು. ಆತ್ಮಹತ್ಯಾ ಬೆಲ್ಟ್‌ಗಳನ್ನು ಸ್ಫೋಟಿಸುವುದು ಹೇಗೆ ಎನ್ನುವ ಪಾಠ ಕೂಡ ಮಾಡಲಾಗುತ್ತಿತ್ತು.

ಈ ತರಬೇತಿ ಪಡೆದವರಲ್ಲಿ ನಾನೂ ಒಬ್ಬಳು ಎಂದು ಆಲಿಸನ್ ಮಗಳು ತಿಳಿಸಿದ್ದಾಳೆ. ತನ್ನ ತಾಯಿ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇಬ್ಬರು ಮಕ್ಕಳು ಹೇಳಿದ್ದಾರೆ.

ತನ್ನ ತಾಯಿಗೆ ಎಷ್ಟು ಸಾಧ್ಯವೋ ಅಷ್ಟು ಕಠಿಣ ಶಿಕ್ಷೆ ನೀಡಿ ಎಂದು ಮಕ್ಕಳು ಕೇಳಿದ್ದಾರೆ. ಆಲಿಸನ್ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ಇದೆಲ್ಲ ಸುಳ್ಳು ಎಂದಿದ್ದಾರೆ.

ನನ್ನ ತಾಯಿ ಸುಳ್ಳು ಹೇಳುತ್ತಾರೆ. ಶಿಕ್ಷೆ ಎಂದು ಹೇಳಿ ನನ್ನ ಮುಖದ ಮೇಲೆ ಕೀಟನಾಶಕ ಸುರಿದಿದ್ದರು. ಕಣ್ಣು ಸುಡುತ್ತಿದೆ ಎಂದರೂ ಕೇಳಲಿಲ್ಲ, ಮೈಮೇಲೆ ಬೊಬ್ಬೆಗಳಾಗಿತ್ತು ಎಂದು ಮಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!