ಐಫೋನ್‌ ಪ್ರಮುಖ ಪೂರೈಕೆದಾರ ಫಾಕ್ಸಕಾನ್‌ ಮುಖ್ಯ ಕಾರ್ಖಾನೆಯ ಸುತ್ತ ಲಾಕ್‌ ಡೌನ್‌ ವಿಧಿಸಿದ ಚೀನಾ: ಉತ್ಪಾದನೆಯಲ್ಲಿ ವ್ಯತ್ಯಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ್‌ ಟೆಕ್‌ ದೈತ್ಯ ಐಫೋನ್‌ ಕಂಪನಿಯ ಪ್ರಮುಖ ಪೂರೈಕೆದಾರನಾಗಿರುವ ಫಾಕ್ಸ್ ಕಾನ್‌ ಕಂಪನಿಯ ಪ್ರಮುಖ ಉತ್ಪಾದನಾ ಘಟಕದ ಸುತ್ತಲೂ ಚೀನಾ ಲಾಕ್‌ ಡೌನ್‌ ವಿಧಿಸಿದೆ. ಝೆಂಗ್‌ಝೌನಲ್ಲಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಮುಖ್ಯ ಸ್ಥಾವರದ ಸುತ್ತಲಿನ ಪ್ರದೇಶವನ್ನು ಏಳು ದಿನಗಳ ಲಾಕ್‌ಡೌನ್‌ಗೆ ಚೀನಾ ಆದೇಶಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಇದರಿಂದಾಗಿ ವಿಶ್ವದ ಅತಿದೊಡ್ಡ ಐಫೋನ್‌ ಕಾರ್ಖಾನೆಯ ಪೂರೈಕೆಗೆ ಹೊಡೆತ ಬೀಳಲಿದ್ದು ಅದರ ಉತ್ಪಾದನೆ ಮೊಟಕುಗೊಳ್ಳಲಿದೆ ಎನ್ನಲಾಗಿದೆ. ಲಾಕ್‌ ಡೌನ್‌ ನವೆಂಬರ್‌ 9ರ ವರೆಗೆ ಮುಂದುವರೆಯಲಿದೆ ಎಂದು ಸ್ಥಳೀಯ ಆಡಳಿತವು ಹೇಳಿಕೆಯೊಂದರಲ್ಲಿ ತಿಳಸಿದೆ ಎಂದು ವರದಿ ಉಲ್ಲೇಖಿಸಿದೆ.

ಕೋರೋನಾವನ್ನು ತಡೆಗಟ್ಟಲು ಶೂನ್ಯ ಕೋವಿಡ್‌ ನೀತಿಯನ್ನು ಕಟ್ಟುನಿಟ್ಟಾಗಿ ಚೀನಾ ಅನುಸರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಲಾಕ್‌ ಡೌನ್‌ ವಿಧಿಸಲಾಗಿದೆ. ಇದು ತೈವಾನ್ ಮೂಲದ ಕಂಪನಿಯಾದ ಫಾಕ್ಸ್‌ ಕಾನ್‌ ನ ಉತ್ಪಾದನೆಗೆ ಹೊಡೆತ ನೀಡಲಿದೆ.

ಕಂಪನಿಯಲ್ಲಿ ಕೋವಿಡ್‌ ಉಲ್ಬಣವು ಸುಮಾರು 2 ಲಕ್ಷ ಉದ್ಯೋಗಿಳು ಕ್ವಾರಂಟೈನ್‌ ನಲ್ಲಿ ಇರಿಸಲಿದೆ. ಶೂನ್ಯ ಕೋವಿಡ್‌ ನೀತಿಯ ವಿರುದ್ಧ ಹಲವರು ಸೌಲಭ್ಯದಿಂದ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಕೆಲವು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಹರಿದಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಝೆಂಗ್‌ಝೌನಲ್ಲಿ ಉಂಟಾದ ಅಡಚಣೆಗಳನ್ನು ನಿಭಾಯಿಸಲು ಪಾಕ್ಸ್‌ ಕಾನ್‌ ಕಂಪನಿಯು ವೇತನ ಹೆಚ್ಚಳ ಹಾಗೂ ಇತರ ಘಟಕಗಳಲ್ಲಿ ಉತ್ಪಾದನೆ ಹೆಚ್ಚಿಸಲು ಚಿಂತಿಸುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!