ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಕಾನ್ ಒಂದು ಫ್ರಾಡ್ ಸಂಸ್ಥೆ, ಹರೇ ರಾಮ ಹರೇ ಕೃಷ್ಣ ಎನ್ನುತ್ತಾ ಗೋವುಗಳನ್ನು ಕಟುಕರಿಗೆ ನೀಡಲಾಗುತ್ತಿದೆ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದರು.
ಈ ಆರೋಪಕ್ಕೆ ಉತ್ತರ ನೀಡಿರುವ ಇಸ್ಕಾನ್ ಯಾವ ಸಾಕ್ಷಿಯೂ ಇಲ್ಲದೆ ಇಸ್ಕಾನ್ ಹೆಸರನ್ನು ಹಾಳು ಮಾಡಲಾಗಿದೆ ಎಂದಿದ್ದಾರೆ. ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೊಟೀಸ್ ಕಳುಹಿಸಲಾಗಿದೆ.
ಗೋವುಗಳು ಕೊನೆಯುಸಿರೆಳೆಯುವವರೆಗೂ ಇಸ್ಕಾನ್‌ನಲ್ಲಿಯೇ ಇರುತ್ತವೆ, ಒಂದು ಗೋವನ್ನೂ ಯಾರಿಗೂ ಮಾಡಿಲ್ಲ. ಆಧಾರರಹಿತ ಆರೋಪ ಮಾಡಿ ಇಸ್ಕಾನ್ ಭಕ್ತರಿಗೆ ನೋವುಂಟುಮಾಡಲಾಗಿದೆ ಎಂದು ಕೊಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ನಡೆದ ಸಂದರ್ಶನವೊಂದರ ತುಣುಕು ಈಗಷ್ಟೇ ವೈರಲ್ ಆಗಿತ್ತು. ಇಸ್ಕಾನ್ ಮೋಸದ ಸಂಸ್ಥೆ, ಇಲ್ಲಿ ಗೋವುಗಳನ್ನು ಕಟುಕರಿಗೆ ನೀಡಲಾಗುತ್ತದೆ ಎಂದು ಮನೇಕಾ ಗಾಂಧಿ ಹೇಳಿದ್ದರು.