ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಬಹುಆತಂಕಕ್ಕೆ ಕಾರಣವಾಗಿದ್ದ ನಿಫಾ ಸೋಂಕು ಇದೀಗ ಸಂಪೂರ್ಣವಾಗಿ ನಿವಾರಣೆಯಾಗಿದೆ.
ನಿಫಾ ಸೋಂಕು ತಗುಲಿದ್ದ ಸೋಂಕಿತರಿಗೆ ಪರೀಕ್ಷೆ ಮಾಡಿದ್ದು, ನೆಗೆಟಿವ್ ಬಂದಿದೆ. ಇದೀಗ ಕೇರಳ ನಿಫಾಮುಕ್ತವಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಒಂಬತ್ತು ವರ್ಷದ ಬಾಲಕನಿಗೂ ಎರಡು ಬಾರಿ ಪರೀಕ್ಷೆ ಮಾಡಿದ್ದು, ಎರಡು ಬಾರಿಯೂ ಸೋಂಕು ನೆಗೆಟಿವ್ ಬಂದಿದೆ ಎಂದಿದ್ದಾರೆ.
ಈ ವರ್ಷದಲ್ಲಿ ಕೇರಳದಲ್ಲಿ ಆರು ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು.