ಇಸ್ಕಾನ್ ದೇವಾಲಯಕ್ಕೆ ಬೆಂಕಿ, ವಿಗ್ರಹಗಳ ನಾಶ: ಬಾಂಗ್ಲಾದಲ್ಲಿ ಹಿಂದುತ್ವಕ್ಕೆ ನೆಲೆ ಇಲ್ವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ತನ್ನ ಕೇಂದ್ರಕ್ಕೆ ಇಂದು ಮುಂಜಾನೆ ಬೆಂಕಿ ಹಚ್ಚಲಾಗಿದೆ ಎಂದು ಇಂಟರ್​ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ ತಿಳಿಸಿದೆ. ಇಸ್ಕಾನ್ ಕಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ದಾಸ್ ಎಕ್ಸ್ ಪೋಸ್ಟ್‌ನಲ್ಲಿ ಇಸ್ಕಾನ್ ಸಂಸ್ಥೆಯ ನಮ್ಹಟ್ಟಾ ಕೇಂದ್ರವನ್ನು ಸುಟ್ಟುಹಾಕಿದ್ದಾರೆ ಎಂದು ಹೇಳಿದ್ದಾರೆ.

ಇಂದು ಮುಂಜಾನೆ 2 ರಿಂದ 3 ಗಂಟೆಯ ನಡುವೆ ತುರಗ್ ಪೊಲೀಸ್ ವ್ಯಾಪ್ತಿಗೆ ಒಳಪಡುವ ಧೌರ್ ಗ್ರಾಮದ ಹರೇ ಕೃಷ್ಣ ನಮ್ಹಟ್ಟಾ ಸಂಘದ ಅಧೀನದಲ್ಲಿರುವ ರಾಧಾ ಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ದೇವಾಲಯಗಳು ಢಾಕಾದಲ್ಲಿವೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.

ಹಿಂದು ಸಮುದಾಯದ ಸದಸ್ಯರ ಮೇಲೆ ದಾಳಿಗಳು ಎಡೆಬಿಡದೆ ನಡೆಯುತ್ತಿವೆ, ಇಸ್ಕಾನ್ ಬಾಂಗ್ಲಾದೇಶದ ಸರ್ಕಾರದ ಗಮನಕ್ಕೆ ಈ ಮಾಹಿತಿಯನ್ನು ನೀಡಿದ್ದರೂ ಅವರ ಕುಂದುಕೊರತೆಗಳನ್ನು ಶಮನಗೊಳಿಸಲು ಮತ್ತು ಅವರ ಕಾಳಜಿಯನ್ನು ಪರಿಹರಿಸಲು ಪೊಲೀಸರು ಮತ್ತು ಆಡಳಿತವು ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!