ಇಸ್ರೇಲ್ ವೈಮಾನಿಕ ದಾಳಿ: ಹಿಜ್ಬುಲ್ಲಾ ಹಿರಿಯ ನಾಯಕ ನಬಿಲ್ ಕೌಕ್ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಜ್ಬುಲ್ಲಾದ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ನಂತರ ಬೈರುತ್ ನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸರಣಿ ವೈಮಾನಿಕ ದಾಳಿ ಮುಂದುವರಿಸಿದ್ದು, ಇದೀಗ ಮತ್ತೊಬ್ಬ ಉನ್ನತ ಹಿಜ್ಬುಲ್ಲಾ ನಾಯಕ ನಬಿಲ್ ಕೌಕ್ ಸಾವಿಗೆ ಇಸ್ರೇಲಿ ಮಿಲಿಟರಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ.

ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆಯೊಳಗಿನ ಹಿರಿಯ ವ್ಯಕ್ತಿಯಾದ ಕೌಕ್‌ನ ಹತ್ಯೆಯನ್ನು ಎಕ್ಸ್ ನಲ್ಲಿ ಘೋಷಿಸಿದೆ.

ನಬಿಲ್ ಕೌಕ್ ಅವರು ಪ್ರಮುಖ ಹಿಡ್ಬುಲ್ಲಾ ಕಮಾಂಡರ್ ಆಗಿದ್ದನು. ಪ್ರಿವೆಂಟಿವ್ ಸೆಕ್ಯುರಿಟಿ ಘಟಕದ ಮುಖ್ಯಸ್ಥನಾಗಿದ್ದನು. ನಸ್ರಲ್ಲಾಹ್‌ಗೆ ಸಂಭಾವ್ಯ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡನು. ಕೌಕ್ 1980ರ ದಶಕದ ಹಿಂದೆ ಹಿಜ್ಬುಲ್ಲಾ ಅನುಭವಿ ಸದಸ್ಯನಾಗಿದ್ದನು. ಹಿಂದೆ ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾದ ಮಿಲಿಟರಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದನು. ಯುನೈಟೆಡ್ ಸ್ಟೇಟ್ಸ್ 2020 ರಲ್ಲಿ ಅವರ ವಿರುದ್ಧ ನಿರ್ಬಂಧಗಳನ್ನು ಘೋಷಿಸಿತ್ತು.

ಇತ್ತೀಚಿನ ವಾರಗಳಲ್ಲಿ ಇಸ್ರೇಲಿ ದಾಳಿಗಳಲ್ಲಿ ಹಲವು ಹಿರಿಯ ಹಿಜ್ಬುಲ್ಲಾ ಕಮಾಂಡರ್‌ ಕೊಲ್ಲಲ್ಪಟ್ಟಿದ್ದಾನೆ.

 

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!