ಒತ್ತೆಯಾಳುಗಳ ಬಗ್ಗೆ ಮಾಹಿತಿ ನೀಡಿ, ಗಾಜಾ ಜನತೆಗೆ ಇಸ್ರೇಲ್ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧ 19 ನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಬೆದರಿಕೆಗೆ ಹಮಾಸ್ ಬಂಡುಕೋರರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಹೋರಾಡುತ್ತಿರುವ ಹಮಾಸ್ ಬಂಡುಕೋರರು, ಬಾಂಬ್ ದಾಳಿಗೆ ಹೆದರುತ್ತಿಲ್ಲ. ಈ ಮಧ್ಯೆ ಹಮಾಸ್ ಉಗ್ರರಿಂದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರಲು ಪಣತೊಟ್ಟಿರುವ ಇಸ್ರೇಲ್ ನಾಗರಿಕರ ಬಳಿ ಮನವಿ ಮಾಡಿದೆ.

ನಾವೆಲ್ಲರೂ ಮತ್ತೆ ಶಾಂತಿಯಿಂದ ಬದುಕಲು, ಬಂಡುಕೋರರ ಹತ್ತಿಕ್ಕಲೇಬೇಕಿದೆ. ಒತ್ತೆಯಾಳುಗಳ ಜೀವ ಅತ್ಯಮೂಲ್ಯ, ಅವರ ಬಗ್ಗೆ ಯಾವುದೇ ಮಾಹಿತಿ ಇದ್ದರೂ ನೀಡಿ, ಇದಕ್ಕೆ ಬಹುಮಾನವಾಗ ಹಣಕಾಸನ್ನು ಪಡೆಯಿರಿ ಎಂದು ಇಸ್ರೇಲ್ ಹೇಳಿದೆ.

ಒತ್ತೆಯಾಳುಗಳು ಇರುವ ಬಗ್ಗೆ ಕೊಂಚ ಮಾಹಿತಿ ದೊರೆತರೂ ಕರೆ ಮಾಡಿ ಹೇಳಿ, ಯಾರು ಕರೆ ಮಾಡಿದ್ದು ಎನ್ನುವ ಮಾಹಿತಿ ಎಲ್ಲಿಯೂ ಹೊರಬರುವುದಿಲ್ಲ. ನಿಶ್ಚಿಂತೆಯಿಂದ ನಮಗೆ ಸಹಾಯ ಮಾಡಿ, ನಿಮ್ಮ ಹೆಸರು ಹೊರಗೆ ಬರುವುದಿಲ್ಲ ಎಂದು ಇಸ್ರೇಲ್ ಮನವಿ ಮಾಡಿದೆ.

ಈ ಬಗ್ಗೆ ಪಾಂಪೆಟ್‌ಗಳನ್ನು ಅಂಟಿಸಲಾಗಿದೆ, ಆದರೆ ಖಾನ್ ಯೂನಿಸ್ ಪ್ರದೇಶದ ನಿರಾಶ್ರಿತರು ಈ ಪತ್ರಗಳನ್ನು ಹರಿದು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!