ದಿನದಿನಕ್ಕೂ ಕ್ಷೀಣಿಸುತ್ತಿರುವ ದೆಹಲಿ ವಾಯು ಗುಣಮಟ್ಟ: ಆತಂಕದಲ್ಲಿ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಾವಳಿ ಹಬ್ಬಕ್ಕೂ ಮುನ್ನವೇ ದೆಹಲಿ ವಾತಾವರಣ ದಯನೀಯ ಪರಿಸ್ಥಿತಿಗೆ ತಲುಪಿದೆ. ಅಲ್ಲಿನ ಗಾಳಿಯನ್ನು ಉಸಿರಾಡಲು ಜನ ಹರಸಾಹಸ ಪಡುತ್ತಿದ್ದಾರೆ. ಈಗಲೇ ಇಂತಹ ವಾತಾವರಣ ಇದ್ದರೆ, ದೀಪಾವಳಿ ಹಬ್ಬದ ನಂತರ ಪರಿಸ್ಥಿತಿ ಇನ್ನೆಷ್ಟು ಹದಗೆಡುತ್ತದೆ ಎಂಬುದನ್ನು ಊಹಿಸಲೂ ಅಸಾಧ್ಯವಾಗಿದೆ. ವಾಯು ಗುಣಮಟ್ಟ ಮುನ್ಸೂಚನೆ ಸಂಸ್ಥೆ (ಎಸ್‌ಎಎಫ್‌ಎಆರ್‌) ಪ್ರಕಾರ, ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇಂದು 330 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ ಎಂದಿದೆ. ದೆಹಲಿಯಲ್ಲಿ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಲಾಕ್‌ಡೌನ್ ಹೇರುವ ಸಂದರ್ಭ ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹವಾಮಾನ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ಆಯೋಗ ಆತಂಕಕ್ಕೆ ಒಳಗಾಗಿದೆ. ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆ ಬಳಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದು, ಎಲೆಕ್ಟ್ರಿಕ್ ಬಸ್, ಮೆಟ್ರೋ ಸೇವೆ ಹೆಚ್ಚಿಸುವಂತೆ ಸೂಚಿಸಿದ್ದಾರೆ. ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಾದರೆ, ಹೊಸ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯವು ಹಂತ-3 ತಲುಪಿದರೆ, ಬಿಎಸ್-III ಮತ್ತು ಬಿಎಸ್-IV ವಾಹನಗಳನ್ನು ನಿಷೇಧಿಸುವ ಸಾಧ್ಯತೆಯಿದೆ. ವಾಹನಗಳಿಗೆ ಬೆಸ-ಸಮ ಸೂತ್ರ ಮರು ಜಾರಿ, ಶಿಕ್ಷಣ ಸಂಸ್ಥೆಗಳು ಮುಚ್ಚುವ ಸಾಧ್ಯತೆಗಳಿವೆ. ಅಲ್ಲದೆ, ಖಾಸಗಿ ಮತ್ತು ಸರ್ಕಾರಿ ಕಚೇರಿಗಳಿಗೆ 50 ಪ್ರತಿಶತ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಅನುಮತಿ, ಕೆಲವು ಸಂಸ್ಥೆಗಳಲ್ಲಿ ಮನೆಯಿಂದಲೇ ಕೆಲಸ ಕಾರ್ಯಗತಗೊಳಿಸುವ ಅವಕಾಶಗಳು ಹೆಚ್ಚಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!