Sunday, December 3, 2023

Latest Posts

VIDEO | ಕ್ರಿಕೆಟ್ ದೇವರಿಗೆ ಶಿರಬಾಗಿದ ವಿರಾಟ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದ್ದೇ ಹವಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್‌ನಲ್ಲಿ ಜಯಭೇರಿ ಬಾರಿಸಿದ ಟೀಂ ಇಂಡಿಯಾ ಇದೀಗ ಫೈನಲ್ಸ್‌ಗೆ ಎಂಟ್ರಿ ಕೊಟ್ಟಿದೆ. ಜೊತೆಗೆ ಕಿಂಗ್ ಕೊಹ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.

ಸಚಿನ್ ತೆಂಡೂಲ್ಕರ್ 49ನೇ ಏಕದಿನ ಸೆಂಚುರಿ ಸಿಡಿಸಿದ್ದಾರೆ, ನಿನ್ನೆ ವಿರಾಟ್ ಕೊಹ್ಲಿ ತಮ್ಮ 50ನೇ ಏಕದಿನ ಸೆಂಚುರಿ ಸಿಡಿಸಿ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.

ಈ ಪಂದ್ಯ ನೋಡೋದಕ್ಕೆ ಸಚಿನ್ ಕೂಡ ಆಗಮಿಸಿದ್ದು, ವಿರಾಟ್ ಸೆಂಚುರಿಸಿ ಸಿಡಿಸಿ ಸಚಿನ್ ಕಡೆ ತಿರುಗಿ ತಲೆಬಾಗಿ ನಮಿಸಿದ್ದಾರೆ, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಚಿನ್ ಕೂಡ ಮನಸ್ಫೂರ್ತಿಯಾಗಿ ಚಪ್ಪಾಳೆ ತಟ್ಟಿ ಹರಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸೆನ್ಶೇಷನ್ ಕ್ರಿಯೇಟ್ ಮಾಡಿದ್ದು, ಎಲ್ಲರ ಸ್ಟೇಟಸ್‌ನಲ್ಲಿ ಇದೇ ವಿಡಿಯೋ ರಾರಾಜಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!