ಇಸ್ರೇಲ್‌ ನಲ್ಲಿ ಪತ್ತೆಯಾಯ್ತು ʼಫ್ಲೊರೊನಾʼ ಸೋಂಕಿನ ಮೊದಲ ಪ್ರಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ರೂಪಾಂತರಿಗಳ ಆತಂಕದ ನಡುವೆ ಈಗ ಇಸ್ರೇಲ್‌ ನಲ್ಲಿ ಮೊದಲ ಫ್ಲೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿದೆ.
ಇದು ಕೊರೋನಾ ಹಾಗೂ ಇ‌ನ್‌ʼಫ್ಲುಯೆಂಜಾದ ಮಿಶ್ರಣವಾಗಿದ್ದು, ಇದು ಅಪಾಯಕಾರಿ ಎಂದು ವರದಿ ತಿಳಿಸಿದೆ. ರಾಬಿನ್‌ ವೈದ್ಯಕೀಯ ಕೇಂದ್ರಕ್ಕೆ ಹೆರಿಗಾಗಿ ದಾಖಲಾಗಿದ್ದ ಮಹಿಳೆಯಲ್ಲಿ ಈ ಫ್ಲೊರೋನಾ ಸೋಂಕು ಪತ್ತೆಯಾಗಿದೆ ಎಂದು ಅರಬ್‌ ನ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.
ಕೋವಿಡ್‌ ಜತೆಗೆ ಪತ್ತೆಯಾದ ಫ್ಲೊರೊನಾ ಸೋಂಕಿನ ವಿರುದ್ಧ ಹೋರಾಡಲು ಇಸ್ರೇಲ್‌ ಸರ್ಕಾರ ನಾಲ್ಕನೇ ಡೋಸ್‌ ನ ಲಸಿಕೆ ನೀಡಲು ಮುಂದಾಗಿದೆ. ಕನಿಷ್ಠ 4 ತಿಂಗಳ ಹಿಂದೆ ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು ಮತ್ತೊಂದು ಡೋಸ್‌ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಇಸ್ರೇಲ್‌ ಆರೋಗ್ಯ ಸಚಿವಾಲಯ ತಿಳಿಸಿದೆ.
ನಾಲ್ಕನೇ ಡೋಸ್‌ ನ ಲಸಿಕೆಯನ್ನು ಮೊದಲ ಹಂತದಲ್ಲಿ ಇಸ್ರೇಲ್‌ ನ ಶೆಬಾ ಮೆಡಿಕಲ್‌ ಸೆಂಟರ್‌ ನಲ್ಲಿ ಪ್ರಾರಂಭಿಸಿದ್ದು, ಹೃದಯ ಸಂಬಂಧಿ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಲಸಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!