Sunday, December 10, 2023

Latest Posts

ಇಸ್ರೇಲ್-ಹಮಾಸ್ ಕದನ: ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ಟೋಬರ್ 14 ರಿಂದ 23 ರವರೆಗೆ ಈಜಿಪ್ಟ್‌ನ ಶರ್ಮ್ ಎಲ್ ಶೇಖ್‌ನಲ್ಲಿ ನಡೆಯಲಿರುವ 2023ರ ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಭಾರತ ಹಿಂದೆ ಸರಿದಿದೆ

ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತ ಚೆಸ್ ಫೆಡರೇಶನ್ (AICF) , ಈಜಿಪ್ಟ್ ಇಸ್ರೇಲ್‌ನಿಂದ ಕೇವಲ 613 ಕಿ.ಮೀ ದೂರದಲ್ಲಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ದವನ್ನು ಪರಿಗಣಿಸಿ, ಸೂಕ್ತ ಚರ್ಚೆಯ ನಂತರ ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್ 2023ರಲ್ಲಿ ಭಾರತ ತಂಡ ಭಾಗವಹಿಸದಿರಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈಜಿಪ್ಟ್, ಗಾಜಾ ಮತ್ತು ಇಸ್ರೇಲ್‌ನೊಂದಿಗೆ ಕಡಲ ಗಡಿಯನ್ನು ಹಂಚಿಕೊಂಡಿದೆ. ಯುವ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಅಖಿಲ ಭಾರತ ಚೆಸ್ ಫೆಡರೇಶನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸ್ಫರ್ಧೆ ನಡೆಯುವ ‌ ಶರ್ಮ್ ಎಲ್ ಶೇಖ್ ಪ್ರದೇಶ ಇಸ್ರೇಲ್‌ನಿಂದ 400 ಕಿ.ಮೀಗಿಂತ ಕಡಿಮೆ ದೂರದಲ್ಲಿದೆ. ಸಂಘರ್ಷವು ಮಧ್ಯಪ್ರಾಚ್ಯದಲ್ಲಿನ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಬಹುದುಎಂದು ಪ್ರಕಟಣೆ ತಿಳಿಸಿದೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ನಮ್ಮ ಆಟಗಾರರು ಸುಮಾರು ಒಂದು ವರ್ಷ ತರಬೇತಿಯನ್ನು ಪಡೆದಿದ್ದರು. ಆದರೂ ಸಹ ನಮ್ಮ ಆಟಗಾರರ ಸುರಕ್ಷತೆಗೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ. ಅನಿರೀಕ್ಷಿತ ಸನ್ನಿವೇಶಗಳನ್ನು ಆಧರಿಸಿ ಫೆಡರೇಶನ್ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಎಐಸಿಎಫ್ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!