ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ನಟಿ ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮೊದಲು ಸಮಂತಾ (Samantha) ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಆರೋಗ್ಯದ ಹಿತದೃಷ್ಟಿಯಿಂದ ನಟಿ ಸಿನಿಮಾದಿಂದ ದೂರವಿದ್ದಾರೆ. ‘ಖುಷಿ’ (Kushi) ಚಿತ್ರದ ರಿಲೀಸ್ ವೇಳೆ ಫಾರಿನ್ನಲ್ಲಿ ಸ್ಯಾಮ್ ಚಿಕಿತ್ಸೆ ಪಡೆಯುತ್ತಿದ್ದರು. ಗ
ಇದೀಗ ಸಮಂತಾ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಡ್ರಿಪ್ಸ್ ಹಾಕಲಾಗಿದೆ. ಈ ಕುರಿತ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅವರ ವೃತ್ತಿ ಬದುಕಿಗೂ ಕೊಂಚ ಎಫೆಕ್ಟ್ ಆಗಿದೆ. ಆದರೆ ಅವರಿಗಿರುವ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ.
ಕೆಲ ದಿನಗಳ ಹಿಂದೆ ಮಾಜಿ ಪತಿ ನಾಗಚೈತನ್ಯ (Nagachaitanya) ಜೊತೆ ಸಮಂತಾ ಪ್ಯಾಚ್ ಅಪ್ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿಗೆ ಒಂದೇ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಬ್ರೇಕ್ ಹಾಕಿದ್ದರು. ಮೈಮೇಲಿದ್ದ ಮಾಜಿ ಪತಿ ಹೆಸರು ಅಳಿಸಲಾಗಿದೆ.