ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಇಸ್ರೇಲ್ (Israel) ಮೇಲೆ ದಾಳಿ ಮಾಡಿದ ಬಳಿಕರ ಏರ್ ಇಂಡಿಯಾ ಅಕ್ಟೋಬರ್ 7 ರಂದು ದೆಹಲಿಯಿಂದ ಟೆಲ್ ಅವೀವ್ಗೆ (Tel Aviv) ಹೋಗುವ ಮತ್ತು ಅಲ್ಲಿಂದ ಬರುವ ವಿಮಾನವನ್ನು ರದ್ದುಗೊಳಿಸಿದೆ.
ಅತಿಥಿಗಳು ಮತ್ತು ಸಿಬ್ಬಂದಿಯ ಹಿತಾಸಕ್ತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
AI 139 ದೆಹಲಿಯಿಂದ ಮಧ್ಯಾಹ್ನ 3.35 ಕ್ಕೆ ಹೊರಟು 7.05 ಕ್ಕೆ ಟೆಲ್ ಅವೀವ್ ತಲುಪಲು ನಿಗದಿ ಆಗಿತ್ತು . ಹಿಂದಿರುಗುವ ವಿಮಾನ AI140 ರಾತ್ರಿ 10.10 ಕ್ಕೆ ಟೆಲ್ ಅವಿವ್‌ನಿಂದ ಹೊರಟು ಭಾನುವಾರ ಬೆಳಿಗ್ಗೆ 7 ಗಂಟೆಗೆ ದೆಹಲಿಯನ್ನು ತಲುಪಬೇಕಿತ್ತು. ಇದೀಗ ವಿಮಾನವನ್ನು ರದ್ದುಗೊಳಿಸಿದೆ.