ʻಇಸ್ರೇಲಿ ರಸ್ತೆಗಳಲ್ಲಿ ಹೆಣಗಳ ರಾಶಿ ನೋಡಿದೆʼ-ಯುದ್ಧದ ಭೀಕರತೆ ವಿವರಿಸಿದ ವ್ಯಕ್ತಿ  

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಮಾಸ್ ಉಗ್ರರ ಹಠಾತ್ ದಾಳಿಯಿಂದಾಗಿ ಇಸ್ರೇಲಿ ರಸ್ತೆಗಳಲ್ಲಿ ಹೆಣಗಳ ರಾಶಿ ನೋಡಿದ್ದೇನೆ ಎಂದು ಇಸ್ರೇಲಿ ಪ್ರಜೆಯೊಬ್ಬರು ಯುದ್ಧದ ಭೀಕರತೆಯನ್ನು ವಿವರಸಿದ್ದಾರೆ.

ʻಹಮಾಸ್ ದಾಳಿಯ 12 ಗಂಟೆಗಳ ನಂತರ ದಕ್ಷಿಣ ಇಸ್ರೇಲಿ ಪಟ್ಟಣವಾದ ಸ್ಡೆರೋಟ್‌ನಲ್ಲಿ ಮೃತ ದೇಹಗಳು ಮತ್ತು ಬುಲೆಟ್‌ನಿಂದ ತುಂಬಿದ ವಾಹನಗಳನ್ನು ನೋಡಿದ್ದೇನೆʼ ಎಂದು ಇಸ್ರೇಲಿ ವ್ಯಕ್ತಿ ಶ್ಲೋಮಿ ಹೇಳಿದ್ದಾರೆ. ಭಾನುವಾರ ರಜಾ ದಿನವಾದ ಕಾರಣ ಮನೆಯಲ್ಲಿ ಮಲಗಿದ್ದ ವೇಳೆ ಆರು ಗಂಟೆಗೆ ಸೈರನ್, ಸ್ಫೋಟದ ಸದ್ದು ಕೇಳಿಸಿತು. ಇಂಟರ್‌ನೆಟ್‌ನಲ್ಲಿ ಭಯೋತ್ಪಾದಕರ ದಾಳಿ ವಿಚಾರ ತಿಳಿದು ಹೊರಬಂದು ನೋಡದಾಗ ಸ್ಡೆರೋಟ್ ಪಟ್ಟಣದ ರಸ್ತೆಯಲ್ಲಿ ಚದುರಿದ ಮೃತ ದೇಹಗಳೇ ಕಣ್ಣಿಗೆ ಕಾಣುತ್ತಿವೆ ಎಂದರು.

ಈ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ, ಮೃತ ದೇಹಗಳ ನಡುವೆ ನಾಯಿಯನ್ನು ನೋಡಿದ್ದೇನೆ ಎಂದು ಪತ್ರಕರ್ತರೊಬ್ಬರು ಭಾವೋದ್ವೇಗದಿಂದ ಹೇಳಿದರು. ಉಗ್ರರು ಇಸ್ರೇಲಿ ಗ್ರಾಮಗಳಿಗೆ ಪ್ರವೇಶಿಸಿ ಜನರನ್ನು ಕೊಂದು ಗಾಜಾಕ್ಕೆ ಒತ್ತೆಯಾಳುಗಳನ್ನಾಗಿ ಮಾಡಲು ಕರೆದೊಯ್ದಿದ್ದಾರೆ. ಇತ್ತ ಎತ್ತ ನೋಡಿದರೂ ರಕ್ತ-ಸಿಕ್ತ ಮೃತದೇಹ, ಒಡೆದ ಗಾಜುಗಳು, ಕಟ್ಟಡಗಳ ನಾಶ, ಕಾರೊಂದರಲ್ಲಿ ಮಹಿಳೆ ಮತ್ತು ಪುರುಷ ಸಾವನ್ನಪ್ಪಿರುವ ದೃಶ್ಯಗಳೇ ಕಣ್ಣಿಗೆ ರಾಚುತ್ತಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!