ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರು ಇಸ್ರೇಲ್ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದು, ಮಾರಣಹೋಮ ಸೃಷ್ಟಿಯಾಗಿದೆ. ಮತ್ತೊಂದೆಡೆ, ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಮೇಲೆ ವೈಮಾನಿಕ ದಾಳಿ ನಡೆಸುತ್ತಿವೆ. ಈ ಸಂದರ್ಭದಲ್ಲಿ ಭಾರತ ಇಸ್ರೇಲ್ ಪರವಾಗಿ ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಪ್ರಧಾನಿ ಮೋದಿ ಬೆಂಬಲ ಘೋಷಣೆ ಬೆನ್ನಲ್ಲೇ ಭಾರತೀಯರು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
ಇದೀಗ ಭಾರತದ ಜನರು ತಮ್ಮ ಮಿತ್ರ ಇಸ್ರೇಲ್ ಪರವಾಗಿ ನಿಂತಿದ್ದು, “ಭಾರತ ಇಸ್ರೇಲ್ ಜೊತೆಗಿದೆ” ಆಶ್ ಟ್ಯಾಗ್‌ನಡಿ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಭಾರತೀಯರು ಇಸ್ರೇಲ್ ಬೆಂಬಲಿಸಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ಹಮಾಸ್ ಉಗ್ರರ ದಾಳಿಗೆ ಬೆಂಬಲ ನೀಡಿದ ಭಾರತಕ್ಕೆ ಧನ್ಯವಾದ ಅರ್ಪಿಸಿದೆ. ದೇಶದ ವಿದೇಶಾಂಗ ವ್ಯವಹಾರಗಳ ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ “ಥ್ಯಾಂಕ್ಸ್ ಇಂಡಿಯಾ” ಎಂದು ಹೇಳುವ ಮೂಲಕ ಇಸ್ರೇಲ್ ಜೊತೆಗಿನ ಭಾರತದ ಚಿತ್ರವನ್ನು ಹಂಚಿಕೊಂಡಿದೆ.
ಈ ದಾಳಿಯಲ್ಲಿ ಎರಡೂ ಕಡೆ ಅಪಾರ ಪ್ರಾಣಹಾನಿ ಉಂಟಾಗಿದೆ. ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದು, ಇಸ್ರೇಲ್ ಪರವಾಗಿ ನಿಲ್ಲುವುದಾಗಿ ಘೋಷಿಸಿದರು. ಬಿಡೆನ್, ರಿಷಿ ಸುನಕ್ ಮತ್ತು ಮಾಕ್ರನ್ ಅವರಂತಹ ವಿಶ್ವ ನಾಯಕರು ಇಸ್ರೇಲ್ ಅನ್ನು ಬೆಂಬಲಿಸಿದರು. ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕಿದೆ ಎಂದು ಜಗತ್ತು ಒತ್ತಿ ಹೇಳಿದೆ.
Thank you India🙏. We are overwhelmed by your support 🇮🇱❤️🇮🇳. https://t.co/rO17FM7XYg
— Naor Gilon (@NaorGilon) October 7, 2023