ಐಸ್ರೆ… ಪ್ರಾಣಿಗಳಿಗೂ ಬಂತು ಸ್ವದೇಶೀ ಕೋವಿಡ್ ವ್ಯಾಕ್ಸೀನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ವಿರುದ್ಧ ಸಮರ ಸಾರಿರುವ ಭಾರತ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಪ್ರಾಣಿಗಳಿಗೆ ಮೊದಲ ಬಾರಿಗೆ ಸ್ವದೇಶಿ ತಯಾರಿಕೆಯ ಕೋವಿಡ್ ಲಸಿಕೆ ಬಿಡುಗಡೆ ಮಾಡಿದೆ.
ಕೋವಿಡ್ -೧೯ ಲಸಿಕೆ ಅನೋಕೊವಾಕ್ಸ್ ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, ವಿಜ್ಞಾನಿಗಳ ಅವಿರತ ಕೊಡುಗೆಗಳಿಂದಾಗಿ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಾವಲಂಬಿಯಾಗಿದೆ. ಇದು ನಿಜವಾದ ದೊಡ್ಡ ಸಾಧನೆಯಾಗಿದೆ ಎಂದರು.
ಈ ಲಸಿಕೆ ಶ್ವಾನ, ಸಿಂಹ, ಚಿರತೆ, ಇಲಿಗಳಿಗೆ ಬಹಳ ಸುರಕ್ಷಿತವಾಗಿದೆ. ಈ ಹೊಸ ಲಸಿಕೆಯನ್ನು ಹರಿಯಾಣ ಮೂಲದ ಕೃಷಿ-ಸಂಶೋಧನಾ ಸಂಸ್ಥೆ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವಿನ್ಸ್ ಅಭಿವೃದ್ಧಿಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!