Sunday, July 3, 2022

Latest Posts

ಶುಕ್ರವಾರದ ನಮಾಜಿನ ವೇಳೆಗೆ ತಮ್ಮ ಎಂದಿನ ‘ಬೀದಿ ಬೆದರಿಕೆ’ ಮೆರೆದ ಮುಸ್ಲಿಮರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿಂದುಗಳ ಆಸ್ಥೆಯಾದ ಶಿವಲಿಂಗದ ವಿರುದ್ಧ ಬೇಕಾಬಿಟ್ಟಿ ವ್ಯಕ್ತವಾಗಿದ್ದ ಕೊಂಕಿಗೆ ಪ್ರತಿಯಾಗಿ ನೀಡಿದ್ದ ಹೇಳಿಕೆಗೆ ಬಿಜೆಪಿ ವಕ್ತಾರರು ಬೆಲೆ ತೆತ್ತ ನಂತರವೂ ಮುಸ್ಲಿಮರು ದೇಶಾದ್ಯಂತ ಶುಕ್ರವಾರದ ನಮಾಜಿನ ವೇಳೆ ತಮ್ಮ ಎಂದಿನ ಬೀದಿಬಲ ಪ್ರದರ್ಶಿಸಿದರು.
ಒಂದೆಡೆ ಕಾನೂನು, ಸಂವಿಧಾನ ಎಂದು ಹೇಳುತ್ತಲೇ ರಸ್ತೆಯಲ್ಲಿ ಬಲಪ್ರದರ್ಶಿಸಿ ತಮಗೆ ಬೇಕಾದಂತೆ ಕಾಯ್ದೆ ತಿದ್ದಿಸುವ ಮಾದರಿಯನ್ನು ಮುಸ್ಲಿಮರ ದೊಡ್ಡ ಗುಂಪೊಂದು ಯಾವತ್ತೂ ಮಾಡಿಕೊಂಡು ಬಂದಿದೆ. ದೇಶದ ವಿವಿಧೆಡೆ ಇದೇ ಮತ್ತೆ ಪ್ರತಿಬಿಂಬಿತವಾಗಿದೆ, ಹಲವೆಡೆ ಇದು ಕಲ್ಲುತೂರಾಟಕ್ಕೂ ತಿರುಗಿದೆ.

ಪ್ರಯಾಗರಾಜ್ ನಲ್ಲಿ ಹೆಚ್ಚುವರಿ ಡಿಜಿಯ ವಾಹನದ ಮೇಲೆಯೇ ಮುಸ್ಲಿಮರು ಕಲ್ಲು ತೂರಿದ್ದಾರೆ.

ದೆಹಲಿಯ ಜಾಮಾ ಮಸೀದಿ ಸೇರಿದಂತೆ ಇತರ ಮಸೀದಿಗಳಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ಪ್ರಯಾಗ್ ರಾಜ್, ಶಹರಾನ್‌ಪುರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ನೂಪುರ್ ಶರ್ಮಾ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಾಮಾ ಮಸೀದಿಯಲ್ಲಿ ಸುಮಾರು 1,500 ಮುಸ್ಲಿಮರು ಜಮಾಯಿಸಿದ್ದರು.
ಶುಕ್ರವಾರದ ಮುಸ್ಲಿಂ ಗುಂಪುಗೂಡುವಿಕೆಗೆ ಪೂರ್ವಭಾವಿಯಾಗಿ ಗುರುವಾರ ಜಮ್ಮುವಿನ ಮಸೀದಿಯೊಂದರ ಎದುರು ನೆರೆದಿದ್ದ ಮುಸ್ಲಿಂ ಗುಂಪು ಮತ್ತು ಅದನ್ನುದ್ದೇಶಿಸಿ ಮಾತನಾಡಿದ ಮೌಲಾನಾ, ನೂಪುರ್ ಶರ್ಮರ ತಲೆಕಡಿಯುವ ಧಮಕಿ ಹಾಕಿದ್ದರು.
ಕರ್ನಾಟಕದ ದರ್ಗಾ ಒಂದರ ಬಳಿ ನೂಪುರ್ ಶರ್ಮ ಪ್ರತಿಕೃತಿಯನ್ನು ಗಲ್ಲಿಗೇರಿಸಿರುವುದೂ ಗುರುವಾರ ವರದಿಯಾಗಿತ್ತು.

ಒಟ್ಟಿನಲ್ಲಿ ಮುಸ್ಲಿಂ ಪುಂಡರಿಗೆರುವುದು ರಕ್ತದಾಹವೇ ಹೊರತು ಯಾವ ನ್ಯಾಯ ಅಥವಾ ಕಾನೂನು ಪಾಲನೆ ಅಲ್ಲ ಎಂಬುದನ್ನು ಶುಕ್ರವಾರ ದೇಶದ ನಾನಾ ಕಡೆಗಳಿಂದ ಬಂದಿರುವ ಚಿತ್ರಗಳು ದೃಢಪಡಿಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss