ಇಸ್ರೋ ಯುವ ವಿಜ್ಞಾನಿ ಕಾರ್ಯಕ್ರಮ : ಮಾರ್ಚ್‌ 20 ರಿಂದ ನೋಂದಣಿ ಪ್ರಕ್ರಿಯೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ), ವಿದ್ಯಾರ್ಥಿಗಳಿಂದ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ (ಯಂಗ್ ಸೈಂಟಿಸ್ಟ್‌) ಮಾರ್ಚ್‌ 20ರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್‌ 3,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಹತೆ :

ಜನವರಿ 1,2023ರ ಅನ್ವಯ 9ನೇ ತರತಿಯಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಏನಿದು ಇಸ್ರೋ ಯುವಿಕಾ 2023 :

ಇಸ್ರೋ ಯುವಿಕಾ 2023, ಶಾಲಾ ಮಕ್ಕಳಿಗಾಗಿ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಇದನ್ನು “ಯುವ ವಿಜ್ಞಾನಿ ಕಾರ್ಯಕ್ರಮ” ಎಂದೂ ಕರೆಯುತ್ತಾರೆ, ಯುವಿಕಾ ಎಂದರೆ “ಯುವ ವಿಜ್ಞಾನಿ ಕಾರ್ಯಕ್ರಮ”.

ವಿಜ್ಞಾನದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಬಾಹ್ಯಾಕಾಶ, ಬಾಹ್ಯಾಕಾಶ ತಂತ್ರಜ್ಞಾನ, ರಾಕೇಟ್‌ ಉಡಾವಣೆ, ಕೃತಕ ಉಪಗ್ರಹಗಳ ಕೆಲಸ, ಸ್ಪೇಸ್ ಅಪ್ಲಿಕೇಶನ್‌ ಕುರಿತು ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಎರಡು ವಾರ ಬಾಹ್ಯಾಕಾಶದ ಪ್ರಾಯೋಗಿಕ ಮಾಹಿತಿಯನ್ನು ಕೊಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!