ಅಭಿಮಾನಿಗಳಿಗೆ ಗಿಫ್ಟ್ ಕೊಡೋಕೆ ನಿರ್ಧಾರ ಮಾಡಿದ ರಾಜ್ ಕುಟುಂಬ, ಪ್ರೀತಿಯ ಉಡುಗೊರೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ನಾಡಿನ ಹೆಮ್ಮೆಯ ನಟ ಪುನೀತ್ ರಾಜ್‌ಕುಮಾರ್ ಜನ್ಮದಿನ. ಪುನೀತ್ ಅಗಲಿ ವರ್ಷಗಳೇ ಕಳೆದರೂ ಅಭಿಮಾನಿಗಳ ಹೃದಯದಲ್ಲಿ ಪುನೀತ್ ಇನ್ನೂ ಜೀವಂತ!
ಮಧ್ಯರಾತ್ರಿ ಅಭಿಮಾನಿಗಳಿಗಾಗಿ ರಾಘವೇಂದ್ರ ರಾಜ್‌ಕುಮಾರ್ ಕೇಕ್ ಕತ್ತರಿಸಿ ತಮ್ಮನ ಜನ್ಮದಿನ ನೆರವೇರಿಸಿದ್ದಾರೆ. ಇನ್ನು ಪುನೀತ್ ಸಮಾಧಿಗೆ ಕುಟುಂಬದವರು ತೆರಳಿದ್ದು, ಪೂಜೆ ಮಾಡುತ್ತಿದ್ದಾರೆ. ಪುನೀತ್ ಸಮಾಧಿ ಮುಂದೆ ಫ್ಯಾನ್ಸ್ ಸಾಲುಗಟ್ಟಿ ನಿಂತಿದ್ದಾರೆ.

ಪುನೀತ್ ಹುಟ್ಟುಹಬ್ಬಕ್ಕೆ ಸಾಲು ಸಾಲು ಅಭಿಮಾನಿಗಳು ಆಗಮಿಸಿವುದು ತಿಳಿದಿದ್ದು, ರಾಜ್ ಕುಟುಂಬ ಒಂದೊಳ್ಳೆ ಗಿಫ್ಟ್ ನೀಡೋಕೆ ರೆಡಿಯಾಗಿದೆ. ಅಭಿಮಾನಿಗಳಿಗೆ ಗಿಡಗಳನ್ನು ಗಿಫ್ಟ್ ಆಗಿ ನೀಡೋದಕ್ಕೆ ರಾಜ್ ಕುಟುಂಬ ರೆಡಿಯಾಗಿದೆ, ಅಪ್ಪು ಬರ್ಥ್‌ಡೇಗಾಗಿ 10 ಸಾವಿರ ಗಿಡಗಳ ಪಾಟ್‌ನ್ನು ತರಿಸಲಾಗಿದ್ದು, ಅಭಿಮಾನಿಗಳಿಗೆ ನೀಡಿ, ಗಿಡಗಳು ಸಾಯದಂತೆ ಸಾಕಿ ಸಲಹಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!